ಉದಯವಾಹಿನಿ, ಮೈಸೂರು: ಉತ್ತನಹಳ್ಳಿಯ ಹೊರ ವಲಯದಲ್ಲಿ ಆಯೋಜಿಸಿದ್ದ ಯುವ ದಸರಾದ ಮೂರನೇ ದಿನದ ಕಾರ್ಯಕ್ರಮವು ಅಮೋಘವಾಗಿ ಯಶಸ್ವಿ ಕಂಡಿದ್ದು, ಬಿಂದಾಸ್ ಬಾಲಿವುಡ್ ನೈಟ್ ಗೆ ಜನ ಸಾಗರವೇ ಹರಿದು ಬಂದಿತ್ತು.ಕಾರ್ಯಕ್ರಮದ ಉದ್ದಕ್ಕೂ ವಿವಿಧ ಚಿತ್ರಗಳ ಗಾಯನಗಳಿಗೆ ನೃತ್ಯ ಮಾಡುವುದರ ಮೂಲಕ ತಾರೆಯರು ನೋಡುಗರ ಕಣ್ಮನ ಸೆಳೆದರು.
ಯುವ ದಸರಾದ ಅಂಗವಾಗಿ ಆಗಮಿಸಿದ್ದಂತಹ ಬಾಲಿವುಡ್ ನ ಖ್ಯಾತ ಗಾಯಕ ಬಾದ್ ಶಾ ಅವರು ವೇದಿಕೆ ಮೇಲೇರುತ್ತಿದ್ದಂತೆ ಪೆÇ್ರೀಪಪಾ ರೋಲ ಎಂದು ಡಿಜೆ ಬೀಟ್ಸ್ ನೊಂದಿಗೆ ರ್ಯಪ್ ಮಾಡುವ ಮೂಲಕ ಯುವ ಜನರು ಕುಳಿತಲ್ಲಿಯೇ ಕುಣಿದು ಕುಪ್ಪಳಿಸುವಂತೆ ಮಾಡಿದರು.
ನೆರೆದಿದ್ದಂತಹ ಯುವ ಸಮೂಹವನ್ನು ಹೇ ಲಡ್ಕಿ ಬ್ಯೂಟಿ ಫುಲ್ ಗರ್ಕೆ ಚುಲ್, ಮೇ.ಪಾನಿ ಪಾನಿ ಹೋಗಾಯಿ, ಇಕು ಹೋಗಯ್ ಹಮಾ ಹಮಾ ಹೀಗೆ ಇನ್ನಿತರ ಆಲ್ಬಮ್ ಗೀತೆಗಳ ಮೂಲಕ ಅವರ ಅಭಿಮಾನಿಗಳಾಗುವಂತೆ ಹುಚ್ಚೆಬ್ಬಿಸಿತು. ಇನ್ನೂ ಎಷ್ಟೋ ಜನರು ಕೂತಲ್ಲೇ ಹಾಡುತ್ತಾ, ಕುಣಿಯುತ್ತ, ಎದೆ ಜೆಲ್ ಎನಿಸುವ ಸೌಂಡ್ಸ್ ನೊಂದಿಗೆ ಡಿಜೆ ಪಾರ್ಟಿ ಮಾಡಿದರೂ.ಯುವ ಜನರು ಬಾಲಿವುಡ್ ನೈಟ್ ನ ಎಲ್ಲಾ ಗೀತೆಗಳಿಗೂ ಹುಚ್ಚೆದ್ದು ಕುಣಿದು, ಬಿಟ್ಸ್ ಗೆ ತಕ್ಕಂತೆ ಹೆಜ್ಜೆ ಹಾಕಿ ಯುವ ಸಂಭ್ರಮವನ್ನು ಸವಿದರು.
ಕನ್ನಡದಲ್ಲಿ ಮಾತನಾಡಿದ ಬಾದ್ ಶಾ, ನಾನು ಗಾಯಕನಲ್ಲ ನಾನೊಬ್ಬ ಬರಹಗಾರ ನನ್ನ ಭಾವನೆಯನ್ನು ಬರೆದು ಹಾಡುತ್ತೇನೆ ಎಂದರು.
ಕಾರ್ಯಕ್ರಮದಲ್ಲಿ ನಟ ಪುನೀತ್ ರಾಜ್ ಕುಮಾರ್ ಅವರ ನೀನೇ ರಾಜ ಕುಮಾರ ಗೀತೆಯ ಮೂಲಕ ನಟ ಪುನೀತ್ ರಾಜ್ ಕುಮಾರ್ ಅವರಿಗೆ ಕಲಾವಿದ ಬಾದ್ ಶಾ ಗೌರವ ಸಮರ್ಪಣೆ ಮಾಡಿದರು.
ಸರಿಗಮಪ ಖ್ಯಾತಿಯ ಜಸ್ ಕರಣ್ ಸಿಂಗ್ ಅವರು ಮರುಭೂಮಿ ನಡುವೆ, ಜಗವೇ ನೀನು ಗೆಳತಿಯೇ ಎಂದು ಆರಂಭಿಸಿ ತಮ್ಮ ಇಂಪಾದ ಧ್ವನಿಯ ಮೂಲಕ ಮೈಸೂರು ಜನರಿಗೆ ರಸ ಸಂಜೆಯನ್ನು ಉಣ ಬಡಿಸಿದರು. ನೆನ್ನೆ ತನಕ ತಿಳಿಯದು ಪ್ರೇಮದ ದಾರಿ ಹಾಗೂ ಕನ್ನಡ ಚಲಚಿತ್ರರಂಗದ ಗಣೇಶ್ ಅವರ ದ್ವಾಪರ ದಾಟುತ ನಿನ್ನನೆ ನೋಡಲು ಬಂದ ರಾಧಿಕೇ ಎಂಬ ಗೀತೆಯ ಮೂಲಕ ಮೈಸೂರಿಗರರನ್ನು ಮತ್ತೊಮ್ಮೆ ದ್ವಾಪರಕ್ಕೆ ಕರೆದೋಯ್ದರು.
