ಉದಯವಾಹಿನಿ, ಲಕ್ಷ್ಮೇಶ್ವರ: ಸಧ್ಯ ತಾಲ್ಲೂಕಿನಲ್ಲೆಡೆ ದಸರಾ ಹಬ್ಬ ಕಳೆಗಟ್ಟಿದೆ. ದೇವಿಯ ಎಲ್ಲ ದೇವಸ್ಥಾನಗಳಲ್ಲಿ ಪುರಾಣಗಳು ಸಾಗಿವೆ. ಅದರಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಪ್ರತಿದಿನ ನಡೆಯುತ್ತಿದ್ದು ನಸುಕಿನ ಜಾವದಲ್ಲಿ ಮಹಿಳೆಯರು ಬನ್ನಿ ಮರಕ್ಕೆ ಪೂಜೆ ಸಲ್ಲಿಸುತ್ತಿದ್ದಾರೆ.

ಅದರಂತೆ ಇಲ್ಲಿನ ಬಸ್ತಿಬಣದ ಮಾಗಡಿ ಬಸವೇಶ್ವರ ದೇವಸ್ಥಾನ ಸಮಿತಿ ಹಾಗೂ ಪೇಠಬಣದ ಶಿವರುದ್ರಮ್ಮ ದೇವಿ ದೇವಸ್ಥಾನದ ಸಮಿತಿ ವತಿಯಿಂದ ದಸರಾ ಮುಗಿಯುವವರೆಗೆ ಅಂದರೆ ಒಂಭತ್ತು ದಿನಗಳವರೆಗೆ ಅನ್ನಸಂತರ್ಪಣೆ ನಡೆಯುತ್ತಿದೆ. ಕಳೆದ ಏಳು ವರ್ಷಗಳಿಂದ ಈ ಅನ್ನಸಂತರ್ಪಣೆ ನಡೆಯುತ್ತಿದ್ದು ದಿನಾಲೂ ರಾತ್ರಿ ನೂರಾರು ಜನರು ಅನ್ನ ಪ್ರಸಾದ ಸೇವಿಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!