ಉದಯವಾಹಿನಿ, ಮಹದೇವಪುರ: ವಿಶ್ವ ವಿಖ್ಯಾತ ಮೈಸೂರು ದಸರಾ ರೀತಿಯಲ್ಲಿ ವರ್ತೂರು ಗ್ರಾಮದಲ್ಲಿ ಜೈಶ್ರೀರಾಮ್ ಸೇವಾ ಸಮಿತಿ ಆಯೋಜಿಸಿದ್ದ ದಸರಾ ಮಹೋತ್ಸವಕ್ಕೆ ಮಾಜಿ ಸಚಿವ ಹೆಚ್. ನಾಗೇಶ್ ಹಾಗೂ ನಿವೃತ್ತ ಎಸಿಪಿ ಸುಬ್ಬಣ್ಣ ಅವರು ಉದ್ಘಾಟನೆ ಮಾಡಿದರು.ಉದ್ಘಾಟಿಸಿ ಮಾತನಾಡಿದ ನಿವೃತ್ತ ಎಸಿಪಿ ಎಸಿಪಿ ಸುಬ್ಬಣ್ಣ ಅವರು ನಮ್ಮ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಯುವ ಪೀಳಿಗೆ ಮುಂದಾಗಬೇಕು ಎಂದು ಹೇಳಿದರು.
ಕರ್ನಾಟಕ ರಾಜ್ಯದಲ್ಲೆ ಹೆಸರಾಗುವ ರೀತಿಯಲ್ಲಿ ಈ ಉತ್ಸವ ಆಚರಣೆ ಮಾಡಲಾಗುತ್ತಿದೆ, ವಿವಿಧೆಡೆ ಮಾಡುವ ಉತ್ಸವಗಳಿಗೆ ಮಾದರಿಯಾಗಿದೆ ಎಂದು ಹೇಳಿದರು.ಆಯೋಜಕ ಸಮಿತಿ ಅಧ್ಯಕ್ಷ ಕುಪ್ಪಿ ಮಂಜುನಾಥ ಅವರು ಮಾತನಾಡಿ ವರ್ತೂರು ದಸರಾ ಉತ್ಸವಕ್ಕೆ ಮೆರಗು ನೀಡುವ ನಿಟ್ಟಿನಲ್ಲಿ ಚಲನಚಿತ್ರ ನಟ ನಟಿಯರು, ಹಾಸ್ಯ ಕಲಾವಿದರು, ಗಾಯಕ ಗಾಯಕಿಯರು, ಬಿಗ್ ಬಾಸ್ ಸ್ಪರ್ಧಿಗಳು, ಕಾಮಿಡಿ ಕಿಲಾಡಿಯ ಖ್ಯಾತಿಯ ನಟ ನಟಿಯರು ಪಾಲ್ಗೊಂಡು ಉತ್ಸವಕ್ಕೆ ಮೆರುಗು ಹೆಚ್ಚಿಸಲಿದ್ದಾರೆ ಎಂದು ನುಡಿದರು.
ವರ್ತೂರು ಉತ್ಸವಕ್ಕೆ ಸಾರ್ವಜನಿಕರ ಕಡೆಯಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದು, ದಸರಾ ಉತ್ಸವಕ್ಕೆ ಆಟಿಕೆಗಳು ಸೇರಿದಂತೆ ಮನರಂಜನೆ ಕಾರ್ಯಕ್ರಮಗಳು ಉತ್ಸವಕ್ಕೆ ಮೆರಗು ನೀಡಿದೆ ಎಂದು ತಿಳಿಸಿದರು.
