ಉದಯವಾಹಿನಿ, ಕೊಪ್ಪಳ: ಅಂದರೆ ಅದು ಮೈಸೂರು ಅಂತ ಇಡಿ ವಿಶ್ವಕ್ಕೆ ಗೊತ್ತು. ದಸರಾ ಹಬ್ಬದ ದಿನ ಇಡಿ ಜಗತ್ತಿನ ಕಣ್ಣು ಮೈಸೂರು ಅಂಬಾರಿಯ ಮೇಲಿರುತ್ತದೆ. ಆದರೆ ಆ ಜಂಬೂ ಸವಾರಿಗೆ ಪ್ರೇರಣೆ ಸಿಕ್ಕಿದ್ದು ಕಲ್ಯಾಣ ಕರ್ನಾಟಕ ಭಾಗದಲ್ಲಿ ಶತಮಾನದ ಹಿಂದೆ ನಡೆದ ಅಂಬಾರಿ ಮೆರವಣಿಗೆ ಅನ್ನೋದು ಹೆಚ್ಚಿನ ಜನರಿಗೆ ಗೊತ್ತಿಲ್ಲ. ಅದು 11ನೇ ಶತಮಾನದಲ್ಲಿಯೇ ಅಂಬಾರಿ ಮೆರವಣಿಗೆ ಅದ್ದೂರಿಯಾಗಿ ನಡೆಯುತ್ತಿತ್ತು. ಇದೀಗ ಪ್ರತಿ ವರ್ಷ ಆ ಜಾಗದಲ್ಲಿ ಮೈಸೂರು ದಸರಾಗೂ ಒಂದು ದಿನ ಮುಂಚೆ ಜಂಬೂ ಸವಾರಿ ನಡೆಯತ್ತೆ. 11ನೇ ಶತಮಾನದಲ್ಲಿ ಗಂಡುಗಲಿ ಅಂತಲೇ ಪ್ರಸಿದ್ದಿ ಪಡೆದಿದ್ದ ಕುಮಾರರಾಮನ ಸಾಮ್ರಾಜ್ಯದ ದೇವತೆಯಾದ ದುರ್ಗಾಪರಮೇಶ್ವರಿ ದೇವಿಗೆ ಪ್ರತಿ ವರ್ಷ ಗಜಪಡೆಯ ಮೇಲೆ ಜಂಬೂಸವಾರಿಯನ್ನು ಅಂದೇ ನಡೆಸಲಾಗುತ್ತಿತ್ತಂತೆ. ಈ ಪರಂಪರೆ 14ನೇ ಶತಮಾನದಲ್ಲಿ ವಿಜಯನಗರ ಅರಸರು ನಡೆಸಿಕೊಂಡು ಬಂದಿದ್ದರು. ಆಮೇಲೆ ಪೆನುಗೊಂಡ ನಂತರ ಅದು ಮೈಸೂರು ಅರಸರು ಅದನ್ನು ನಡೆಸಿಕೊಂಡು ಬಂದರು.
ಮೈಸೂರು ದಸರಾಗೆ ಪ್ರೇರಣೆಯಾದ ಹೇಮಗುಡ್ಡ ದಸರಾ ಅನಾದಿಕಾಲದಿಂದಲೂ ಕೂಡ ಪ್ರತಿ ವರ್ಷ ಕಟ್ಟಿಗೆಯ ಅಂಬಾರಿಯಲ್ಲಿ ಆನೆಯ ಮೇಲೆ ದೇವಿಯ ಮೆರವಣಿಗೆ ನಡೆಸಲಾಗತ್ತಿತ್ತಂತೆ. ಇದೇ ಪರಂಪರೆ ಇದೀಗ ಮೈಸೂರಿನಲ್ಲಿ ಮುಂದುವರಿದಿದೆ. ಪರಂಪರೆ ಆರಂಭವಾದ ಸ್ಥಳದಲ್ಲೇ ಅಂಬಾರಿ ಮೆರವಣಿಗೆ ಪರಂಪರೆ ನಿಂತುಹೋಗಿತ್ತು. ಆದರೆ ಕಳೆದ ನಲವತ್ತು ವರ್ಷಗಳಿಂದ ಹಳೆಯ ಪರಂಪರೆಯನ್ನು ಮತ್ತೆ ಮುಂದುವರಿಸಿಕೊಂಡು ಬರಲಾಗುತ್ತಿದೆ. ದಸರಾ ಜಂಬೂ ಸವಾರಿ ಮೆರವಣಿಗೆಯಲ್ಲಿ ಕೊಪ್ಪಳ, ಗಂಗಾವತಿ ಸೇರಿ ಸುತ್ತಮುತ್ತಲಿನ ಜನರು ಭಾಗವಹಿಸಿ ಈ ದಸರಾ ವೈಭೋಗವನ್ನ ಕಣ್ತುಂಬಿಕೊಳ್ತಾರೆ. ಮೈಸೂರು ದಸರಾ ಮಾದರಿಯಲ್ಲೇ ನಡೆಯುವ ದುರ್ಗಾಪರಮೇಶ್ವರಿ ದೇವಿಯ ಜಂಬೂಸವಾರಿ ಕಲ್ಯಾಣ ಕರ್ನಾಟಕ ಭಾಗದ ದಸರಾ ಎಂದೆ ಖ್ಯಾತಿ ಪಡೆದಿದ್ದು, ಜನರನ್ನ ತನ್ನತ್ತ ಆಕರ್ಷಿಸುತ್ತಿದೆ. ಇನ್ನೂ ಹೇಮಗುಡ್ಡ ದಸರಾ ವೀಕ್ಷಣೆಗೆ ಬರುವ ಜನರು ಮೈಸೂರು ದಸರಾ ನೋಡಿದಷ್ಟೇ ಖುಷಿ ಪಡುತ್ತಾರೆ.
