ಉದಯವಾಹಿನಿ, ಬೆಂಗಳೂರು : ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ ಎಂದು ವಿಪಕ್ಷ ನಾಯಕ ಆರ್. ಅಶೋಕ್ ರಾಜ್ಯಸರ್ಕಾರದ ವಿರುದ್ದ ಲೇವಡಿ ಮಾಡಿದ್ದಾರೆ.
ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ಧಾರೆ. ಇಂತಹ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಕಿಡಿ ಕಾರಿದ್ದಾರೆ.
ಮುಸ್ಲಿಂ ಮತೀಯ ಭಯೋತ್ಪಾದಕರಿಗೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಹಬ್ಬ. ಹಿಂದೆಯೂ ಅನೇಕ ಗಲಭೆ ಕೇಸ್ ವಾಪಸ್ ಪಡೆದು ಅಧಿಕಾರ ಕಳ್ಕೊಂಡ್ರು. ಈಗಲೂ ಹುಬ್ಬಳ್ಳಿ ಗಲಭೆ ಕೇಸ್ ಗಳನ್ನು ವಾಪಸ್ ಪಡೆದಿದ್ದಾರೆ. ಸರ್ಕಾರದ ಈ ನಡೆ ಪೊಲೀಸರ ಸ್ಟೈರ್ಯ ಕುಂದಿಸುವ ಕೆಲಸ ಎಂದು ಟೀಕಿಸಿದ್ದಾರೆ.

ಸಮುದಾಯದವರ ಮೇಲೆ ದೂರು ದಾಖಲಿಸಬಾರದು ಅಂತ. ಸರ್ಕಾರ ಮತಾಂಧ ಶಕ್ತಿಗಳಿಗೆ ಪ್ರಚೋದನೆ ಕೊಡ್ತಿದೆ. ಇದರ ಬಗ್ಗೆ ಬಿಜೆಪಿಯಿಂದ ಹೋರಾಟ ನಡೆಸುವ ಬಗ್ಗೆ ಚರ್ಚೆ ಮಾಡ್ತೇವೆ. ಈಗಾಗಲೇ ರಾಜ್ಯದಲ್ಲಿ ಪಾಕ್, ಬಾಂಗ್ಲಾದಿಂದ ಅಕ್ರಮವಾಗಿ ಬಂದಿರುವವರನ್ನು ಬಂಧಿಸಿದ್ದಾರೆ. ಇವರ ಮೇಲಿನ ಕೇಸ್‌ಗಳನ್ನೂ ವಾಪಸ್ ಪಡೆದುಕೊಳ್ಳಿ ಎಂದು ಟೀಕಿಸಿದ್ದಾರೆ.ಸಿದ್ದರಾಮಯ್ಯ ಗೋಮುಖ ವ್ಯಾಘ್ರನ ರೀತಿ ವರ್ತಿಸುತ್ತಿದ್ದಾರೆ ಈ ತರಹದ ಬೆಳವಣಿಗೆಗಳಿಂದ ರಾಜ್ಯದಲ್ಲಿ ಅಭಿವೃದ್ಧಿ ಕುಂಠಿತ ಆಗಲಿದೆ. ಕಾನೂನು ಸುವ್ಯವಸ್ಥೆ ಹದಗೆಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

Leave a Reply

Your email address will not be published. Required fields are marked *

error: Content is protected !!