ಉದಯವಾಹಿನಿ,ಬೀದರ: ಪೂಜ್ಯ ಡಾ. ಚನ್ನಬಸವ ಪಟ್ಟದ್ದೇವರು ಜಿಲ್ಲಾ ರಂಗಮಂದಿರದಲ್ಲಿ ಸೋಮವಾರ ಬೆಳಿಗ್ಗೆ 11-30 ರಿಂದ ರಾತ್ರಿ 10 ಗಂಟೆಯವರೆಗೆ ರಾಜ್ಯ ಮಟ್ಟದ ಬುದ್ಧ ಭೀಮಗೀತೆಗಳ ಭಜನೆ ಸಂಗೀತ ಗಾಯನ ಸ್ಪರ್ಧೆಯನ್ನು ಕರ್ನಾಟಕ ಪಂಚಶೀಲ ಕಲಾ ಸಾಹಿತ್ಯದ ಪರಿಷತ್ತು ಬೀದರ ವತಿಯಿಂದ ಸೋಮವಾರ ಕಾರ್ಯಕ್ರಮ ಜರುಗಿತು. ರಾಜ್ಯದ ವಿವಿಧ ಜಿಲ್ಲೆಗಳಿಂದ 27 ಭಜನೆ ತಂಡಗಳು ಭಾಗವಹಿಸಿದವು. ಭೀಮಶಾಹಿರ ಕಾಳಿದಾಸ ಯುಥ ಕ್ಲಬ್ ಅಟ್ಟರಗಾ ಭಾಲ್ಕಿ ಬೀದರ ಪ್ರಥಮ 21 ಸಾವಿರ, ಸೋಮೇಶ್ವರ ಭಜನೆ ತಂಡ ಬಾಗೆವಾಡಿ ವಿಜಯಪುರ ಜಿಲ್ಲೆ ದ್ವಿತೀಯ 10 ಸಾವಿರ, ಜೈಭೀಮ ಕಲಾಪಥ ಗುತ್ತಿ ಬಸವಕಲ್ಯಾಣ ಬೀದರ ತೃತೀಯ 5 ಸಾವಿರ ಬಹುಮಾನ ಪಡೆದುಕೊಂಡವು. ಕಾರ್ಯಕ್ರಮದ ಉದ್ಘಾಟನೆ ಡಾ. ಬೆಲ್ದಾಳ ಶರಣರು ಮಾತನಾಡಿ, ನಮ್ಮ ದೇಶದಲ್ಲಿ ಪ್ರಜೆಗಳು ಶಾಂತಿ, ನೆಮ್ಮದಿ ಬದುಕಿಗೆ ಬುದ್ಧ ಬೇಕು. ಶರಣ ತತ್ವಗಳು ಪ್ರಸಾರ ಮಾಡುವ, ಅಂಬೇಡ್ಕರ ಚಿಂತನೆಗಳು ಪ್ರಸಾರ ಮಾಡುವ ಕಾರ್ಯ ಮಾಡುತ್ತಿರುವೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ??ಣರಾವ ಕಾಂಚೆ ವಹಿಸಿದರು, ಮುಖ್ಯ ಭಾಷಣಕಾರರಾಗಿ ಪೆÇ್ರ. ಬ ಸವರಾಜ ಮಯೂರ್ ಮಾತನಾಡಿ, ಹಿಂದುವಾಗಿ ಹುಟ್ಟಿರುವ, ಸಾಯಲಾರೆ ಎನ್ನುವ ಘೋಷಣೆ ಬಾಬಾ ಸಾಹೇಬರು ಮಾಡಿದರು. ಕಾರಣ ಬಾಲ್ಯದೊಳಗೆ ಜಾತಿ ಧರ್ಮದ ಹೆಸರಿನಲ್ಲಿ ಕೆಳ ಜಾತಿಯಾಗಿ ನೋಡಿ ಕೊಟ್ಟಿರುವ ಸಾವು ನೋವು, ಸಹಿಸಿಕೊಂಡು ಈ ಘೋಷಣೆ ಮಾಡಿದರು. ಮೂವತ್ತು ವರ್ಷಗಳ ನಂತರ ಐದು ಲಕ್ಷ ಜನರೊಂದಿಗೆ ಬೌದ್ಧ ದೀಕ್ಷೆಯನ್ನು ಪಡೆದುಕೊಂಡರು. ಮನಷ್ಯರೆಲ್ಲರೂ ಒಂದೇ ಎನ್ನುವ ಸಮಾಜ ಜಾತಿ ಸ್ತರವಿನ್ಯಾಸದಿಂದ ಮನಸ್ಸಿನಿಂದ ಇಂದು ಸಹ ಪ್ರತಿನಿತ್ಯ ಶೋಷಣೆಗಳು ನಡೆಯುತ್ತಿವೆ. ರಾಜ್ಯಾಂಗ ಸಮಸ್ತ ಭಾರತೀಯರಿಗೆ ಪ್ರಜಾಪ್ರಭುತ್ವದ ದೀಕ್ಷೆ ನೀಡಿ, ಸರ್ವರು ಸಮಾನರು, ಸರ್ವರಿಗೂ ಸಮಾನ ರಕ್ಷಣೆ, ಸರ್ವರಿಗೂ ಸಮಾನ ಪ್ರಗತಿ ನೀಡಿದೆ. ಜನಪ್ರತಿನಿಧಿಗಳು, ಸರ್ಕಾರದ ಅಧಿಕಾರಿಗಳು ಇದನ್ನು ಅರ್ಥ ಮಾಡಿಕೊಳ್ಳುವ ಅನಿವಾರ್ಯತೆಯಾಗಿದೆ. ಡಾ. ಜ್ಞಾನಸಾಗರ ಭಂತೆ ಶ್ರೀಶರಣ ಪಂಚಶೀಲ ಬೋಧಿಸಿದರು.
