ಉದಯವಾಹಿನಿ, ಹುಣಸಗಿ: ‘ಪುರಾಣ ಪ್ರವಚನಗಳು ನಮ್ಮಲ್ಲಿನ ದೋಷಗಳನ್ನು ಪರಿಹರಿಸಿ ಸರಿದಾರಿಯಲ್ಲಿ ನಡೆಯುವಂತಾಗಲು ಹೆಚ್ಚು ಮಹತ್ವದ ಪಾತ್ರ ವಹಿಸುತ್ತವೆ’ ಎಂದು ವಿರುಪಾಕ್ಷಯ್ಯ ದಿಗಳೂರು ಹೇಳಿದರು.
ಹುಣಸಗಿ ತಾಲ್ಲೂಕಿನ ಕಲ್ಲದೇವನಹಳ್ಳಿ ಗ್ರಾಮದ ಖಾಸ್ಗತೇಶ್ವರ ಶಾಂತಾಶ್ರಮದ ವಾರ್ಷಿಕೋತ್ಸವ ಹಾಗೂ ವಿರಕ್ತ ಶಿವಯೋಗಿಗಳ 2ನೇ ಜಾತ್ರಾ ಮಹೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ‘ತಿಳಿದು ಬದುಕು’ ಪ್ರವಚನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
‘ಸಾಕಷ್ಟು ಜನರಲ್ಲಿ ಹಣ ಇರುತ್ತದೆ. ಆದರೆ ಅದು ಯಾವುದಕ್ಕೂ ಸಾರ್ಥಕವಾಗುವದಿಲ್ಲ. ಆದರೆ ಕೆಲವರು ಬಡವರಾಗಿರುತ್ತಾರೆ. ದುಡಿದು ಜೀವನ ಮಾಡುತ್ತಾರೆ. ಆದರೆ ಅವರು ದುಡಿದು ತಂದದ್ದರಲ್ಲಿಯೇ ಕೆಲವಷ್ಟು ಇತರರಿಗೆ ಹಂಚಿ ತಿನ್ನುತ್ತಾರೆ. ಇದು ಸಾರ್ಥಕ ಬದುಕು. ಯಾರು ಧರ್ಮ ಕಾರ್ಯಗಳಲ್ಲಿ ಪಾಲ್ಗೊಳ್ಳುತ್ತಾರೋ ಅವರು ಭಗವಂತನ ಕರುಣೆಗೆ ಪಾತ್ರರಾಗುತ್ತಾರೆ’ ಎಂದರು.
ತಾಳಿಕೋಟೆಯ ಖಾಸ್ಗತೇಶ್ವರ ಮಠದ ಸಿದ್ಧಲಿಂಗದೇವರು ಮಾತನಾಡಿ, ‘ದೇವರು ನಮಗೆ ನೀಡಿದ ಜನ್ಮವನ್ನು ಪಾವನಗೊಳಿಸಿಕೊಳ್ಳಲು ಆಸ್ತಿ, ಅಂತಸ್ತು ಬೇಕಾಗಿಲ್ಲ. ಇತತರ ಕಷ್ಟಗಳಿಗೆ ಸ್ಪಂದಿಸುವ ಹಾಗೂ ಮತ್ತೊಬ್ಬರ ಕಣ್ಣೀರು ಒರೆಸುವ ಗುಣ ನಮ್ಮಲ್ಲಿದ್ದರೇ ಅದುವೇ ಮುಖ್ಯ’ ಎಂದರು.
ಕಲಾವಿದರಾದ ಅಮರಯ್ಯಸ್ವಾಮಿ ಜಾಲಿಬೆಂಚಿ, ಪರಶುರಾಮ ಚಟ್ನಳ್ಳಿ, ಯಲ್ಲಪ್ಪ ಗುಂಡಳ್ಳಿ, ಬಸನಗೌಡ ಬಿರಾದಾರ ಹಾಜರಿದ್ದರು. ಕಲ್ಲದೇವನಹಳ್ಳಿ, ವಜ್ಜಲ, ಚನ್ನೂರು, ಹೆಬ್ಬಾಳ, ಕಚಕನೂರು, ಬೆನಕನಹಳ್ಳಿ, ದೇವತಕಲ್ಲ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಭಕ್ತರು ಪಾಲ್ಗೊಂಡಿದ್ದರು.

Leave a Reply

Your email address will not be published. Required fields are marked *

error: Content is protected !!