ಉದಯವಾಹಿನಿ, ಮಂಡ್ಯ: ಈಜಲು ಕೆರೆಗೆ ತೆರಳಿದ್ದ ಇಬ್ಬರು ಬಾಲಕರು ಕೆರೆಯಲ್ಲಿ ಮುಳುಗಿ ಮೃತಪಟ್ಟಿರುವ ಮದ್ದೂರು ತಾಲೂಕಿನ ದೇಶಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ನಡೆದಿದೆ.
ಶಂಕರಪುರ ಗ್ರಾಮದ ಸೋಮು (೧೪) ಹಾಗೂ ಮುತ್ತುರಾಜು (೧೭) ಮೃತಪಟ್ಟವರು, ಕೆರೆಯಲ್ಲಿ ಈಜು ಹೊಡೆಯಲೆಂದು ಐವರು ಸ್ನೇಹಿತರು ಕೆರೆಗೆ ತೆರಳಿದ್ದರು. ಈ ವೇಳೆ ಈಜು ಬಾರದೇ ಸೋಮು ಹಾಗೂ ಮುತ್ತುರಾಜು ಕೆರೆಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ. ಕೆರೆಯಲ್ಲಿ ಮುಳುಗಿದ ಇಬ್ಬರ ಪೈಕಿ ಮುತ್ತುರಾಜು ಮೃತದೇಹ ಪತ್ತೆಯಾಗಿದೆ. ಸೋಮು ಮೃತದೇಹಕ್ಕಾಗಿ ಶೋಧಕಾರ್ಯ ಮುಂದುವರಿದಿದೆ. ಈ ಸಂಬಂಧ ಬೆಸಗರಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
