ಉದಯವಾಹಿನಿ, ಬಂಟ್ವಾಳ: ಸಿದ್ಧಕಟ್ಟೆ ಕೊಡಂಗೆ ವೀರ-ವಿಕ್ರಮ ಜೋಡುಕರೆಯಲ್ಲಿ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ ಶನಿವಾರ ಹಮ್ಮಿಕೊಂಡಿದ್ದ ಸಬ್ ಜೂನಿಯರ್ ನೇಗಿಲು ಮತ್ತು ಹಗ್ಗ ವಿಭಾಗದ ‘ರೋಟರಿ ಕಂಬಳ ಕೂಟ’ದ ಫಲಿತಾಂಶ ಪ್ರಕಟಗೊಂಡಿದೆ.
ವಿಜೇತರಿಗೆ ಪ್ರಥಮ ಬಹುಮಾನವಾಗಿ ಅರ್ಧ ಪವನ್ ಮತ್ತು ದ್ವಿತೀಯ ಬಹುಮಾನವಾಗಿ ಕಾಲು ಪವನ್ ಚಿನ್ನದ ಪದಕ ಹಾಗೂ ತೃತೀಯ ಮತ್ತು ಚತುರ್ಥ ಬಹುಮಾನವಾಗಿ ತಲಾ ₹ 5ಸಾವಿರ ನಗದು ನೀಡಲಾಯಿತು.
ಹಗ್ಗ ವಿಭಾಗ: ಪ್ರಥಮ: ಎಂಬತ್ತು ಬಡಗುಬೆಟ್ಟು ಕಲ್ಲಪಾಪು ಶ್ರೀಕ ಸಂದೀಪ್ ಶೆಟ್ಟಿ (ಬಿ). ಓಡಿಸಿದವರು: ಬೈಂದೂರು ವಿಶ್ವನಾಥ ದೇವಾಡಿಗ. ದ್ವಿತೀಯ: ಬಳ್ಕುಂಜೆಗುತ್ತು ಮಲ್ಲಿಕಾ ಯಶವಂತ ಶೆಟ್ಟಿ. ಓಡಿಸಿದವರು: ಬೈಂದೂರು ಕೆರ್ಗಲ್ ಗರಡಿಮನೆ ಹರೀಶ ಪೂಜಾರಿ.ನೇಗಿಲು ವಿಭಾಗ: ಪ್ರಥಮ: ಶ್ರೀಸ್ವಾಮಿ ಧಾಮ ಹೊಳೆಕಟ್ಟು ಕುಂಭಾಶ್ರೀ. ಓಡಿಸಿದವರು: ಬೈಂದೂರು ಮಂಜುನಾಥ ಗೌಡ. ದ್ವಿತೀಯ: ಮುಡಾರು ಹಚ್ಚೊಟ್ಟು ಫ್ಲೋರಾ ನಿವಾಸ ರೋಹನ್ ರಂಜಿತ್ ಫರ್ನಾಂಡಿಸ್ (ಎ). ಓಡಿಸಿದವರು: ಕಕ್ಯಪದವು ಮಹಮ್ಮಾಯಿ ಗೌತಮ್.
ತೃತೀಯ: ಅನಂತಾಡಿ ವೈಶಾಕ್ ವೈಭವ ಮಡಿವಾಳ (ಎ). ಓಡಿಸಿದವರು: ಮಂಗಲ್ಪಾಡಿ ರಕ್ಷಿತ್ ಶೆಟ್ಟಿ. ಚತುರ್ಥ: ಮೊಗರುಗುತ್ತು ನಿತಿನ್ ದಿವಿನ್ ರೈ. ಓಡಿಸಿದವರು: ಪಡುಸಕೂರು ಪೃಥ್ವಿರಾಜ್ ಪೂಜಾರಿ.
