ಉದಯವಾಹಿನಿ, ನವದೆಹಲಿ : ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಮತ್ತು ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ದೇಶವು ತಕ್ಕ ಮಟ್ಟಕ್ಕೆ ಶಾಂತಿಯನ್ನು ಸ್ಥಾಪಿಸಿದ್ದರೂ ಸಹ ಭಯೋತ್ಪಾದನೆ, ಒಳನುಸುಳುವಿಕೆ ಮತ್ತು ಧಾರ್ಮಿಕ ಉದ್ವಿಗ್ನತೆಯನ್ನು ಸೃಷ್ಟಿಸುವ ಪಿತೂರಿ ವಿರುದ್ಧದ ಹೋರಾಟ ಮುಂದುವರಿಯುತ್ತದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ರಾಷ್ಟ್ರೀಯ ಪೊಲೀಸ್ ಸ್ಮಾರಕದಲ್ಲಿ ನಡೆದ ಪೊಲೀಸ್ ಸಂಸ್ಮರಣಾ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಪೊಲೀಸ್ ಹುತಾತ್ಮರ ತ್ಯಾಗ ವ್ಯರ್ಥವಾಗುವುದಿಲ್ಲ ಮತ್ತು 2047 ರ ವೇಳೆಗೆ ದೇಶವು ಖಂಡಿತವಾಗಿಯೂ ಸಂಪೂರ್ಣ ಅಭಿವೃದ್ಧಿ ಹೊಂದಿದ ರಾಷ್ಟçವಾಗಲಿದೆ ಎಂದು ಹೇಳಿದರು. ಕಳೆದ 10 ವರ್ಷಗಳಲ್ಲಿ, ಜಮ್ಮು ಮತ್ತು ಕಾಶ್ಮೀರ, ಈಶಾನ್ಯ ಪ್ರದೇಶ ಮತ್ತು ನಲ್ಸಲ್ ಪೀಡಿತ ಪ್ರದೇಶಗಳಲ್ಲಿ ಸಾಪೇಕ್ಷ ಶಾಂತಿಯನ್ನು ಸ್ಥಾಪಿಸಲಾಗಿದೆ. ಆದರೂ ನಮ್ಮ ಹೋರಾಟ ಮುಗಿದಿಲ್ಲ.
ಮಾದಕ ದ್ರವ್ಯ, ಸೈಬರ್ ಕ್ರೈಂ , ಧಾರ್ಮಿಕ ಉದ್ವಿಗ್ನತೆ, ಒಳನುಸುಳುವಿಕೆ ಮತ್ತು ಭಯೋತ್ಪಾದನೆಯನ್ನು ಸೃಷ್ಟಿಸುವ ಪಿತೂರಿಯ ವಿರುದ್ಧ ನಾವು ಹೋರಾಡುವುದನ್ನು ಮುಂದುವರಿಸುತ್ತೇವೆ, ಅದು ನಮಗೆ ಸವಾಲುಗಳನ್ನು ನೀಡುತ್ತಿದೆ ಎಂದರು. ಸ್ವಾತಂತ್ಯದ ನಂತರ, 36,438 ಪೊಲೀಸ್ ಸಿಬ್ಬಂದಿ ದೇಶದ ಸುರಕ್ಷತೆ ಮತ್ತು ಭದ್ರತೆಗಾಗಿ ತಮ್ಮ ಪ್ರಾಣವನ್ನು ಅರ್ಪಿಸಿದ್ದಾರೆ, ಕಳೆದ ವರ್ಷದಲ್ಲಿ ಅವರಲ್ಲಿ 216 ಮಂದಿ ಇದ್ದಾರೆ ಎಂದು ಗೃಹ ಸಚಿವರು ಹೇಳಿದರು. ದೇಶದ ಅಭಿವೃದ್ಧಿ ಪಯಣದಲ್ಲಿ ಅವರ ತ್ಯಾಗಕ್ಕೆ ದೇಶ ಎಂದೆಂದಿಗೂ ಚಿರಋಣಿಯಾಗಿದೆ ಎಂದರು.ಇದೇ ವೇಳೆ ಹುತಾತ್ಮರ ಕುಟುಂಬ ಸದಸ್ಯರಿಗೆ ಅವರ ತ್ಯಾಗ ವ್ಯರ್ಥವಾಗುವುದಿಲ್ಲ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ಯಾವುದೇ ಸವಾಲು ಎದುರಾದರೂ ದೇಶವು ಸುರಕ್ಷಿತವಾಗಿ ಉಳಿಯುತ್ತದೆ ಮತ್ತು ಗುರಿಯನ್ನು ಸಾಧಿಸುತ್ತದೆ ಎಂದು ಅವರು ಹೇಳಿದರು.
