ಉದಯವಾಹಿನಿ, ಬಿಡದಿ: ಪಟ್ಟಣದಲ್ಲಿರುವ ನೆಲ್ಲಿಗುಡ್ಡೆ ಕೆರೆಯ ಭರ್ತಿಗೆ ಎರಡು ಅಡಿ ಮಾತ್ರ ಬಾಕಿ ಇದೆ.
ನೆಲ್ಲಿಗುಡ್ಡೆ ಕೆರೆ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಬಂದು ಭೇಟಿ ನೀಡುವ ತಾಣ. ಪ್ರಕೃತಿ ಪ್ರಿಯರಿಗೆ ಮತ್ತು ವಾರಾಂತ್ಯದಲ್ಲಿ ಸಮಯ ಕಳೆಯಲು ಪ್ರಶಸ್ತ ಸ್ಥಳವಾಗಿದೆ. 2022ರಲ್ಲಿ ಪೂರ್ಣ ಪ್ರಮಾಣದಲ್ಲಿ ಕೆರೆ ತುಂಬಿತ್ತು. ಆದರೆ ಕಳೆದ ಬಾರಿ ಸರಿಯಾದ ಮಳೆ ಬಾರದ ಕಾರಣ ಕೆರೆ ಭರ್ತಿಯಾಗಿರಲಿಲ್ಲ. ಈ ಬಾರಿ ಹಿಂಗಾರು ಮಳೆ ಭರ್ಜರಿಯಾಗಿ ಆಗುತ್ತಿದ್ದು ಕೆರೆ ಪೂರ್ಣ ಪ್ರಮಾಣದಲ್ಲಿ ತುಂಬಿ ಹರಿಯುವ ವಿಶ್ವಾಸವಿದೆ.
