ಉದಯವಾಹಿನಿ, ಚಿಕ್ಕಮಗಳೂರು: ಬೆಟ್ಟ ಏರಿ ಬಿಂಡಿಗ ದೇವೀರಮ್ಮ ದೇವಿ ದರ್ಶನಕ್ಕೆ ವರ್ಷದಲ್ಲಿ ಒಂದು ದಿನ ಮಾತ್ರ ಇದ್ದ ಅವಕಾಶವನ್ನು ಮುಂದಿನ ವರ್ಷದಿಂದ ಎರಡು ದಿನಗಳಿಗೆ ವಿಸ್ತರಣೆ ಮಾಡಲು ದೇವಾಲಯ ವ್ಯವಸ್ಥಾಪನಾ ಮಂಡಳಿ ನಿರ್ಧರಿಸಿದೆ.
ಬೆಟ್ಟದ ತಳದಲ್ಲಿರುವ ದೇಗುಲದಲ್ಲಿ ಪ್ರತಿಷ್ಠಾಪನೆ ಮಾಡಿರುವ ದೇವಿಯ ವಿಗ್ರಹ ನರಕ ಚತುರ್ದಶಿಯ ದಿನ ಬೆಟ್ಟದ ತುದಿಗೆ ಒಯ್ದು ಪ್ರತಿಷ್ಠಾಪನೆ ಮಾಡಲಾಗುತ್ತಿತ್ತು.
ಒಂದೇ ದಿನ ಹೆಚ್ಚಿನ ಭಕ್ತರು ಜಮಾಯಿಸಿದ್ದರಿಂದ ಹಲವರು ಬಿದ್ದು ಕೈಕಾಲು ಮುರಿದು ಕೊಂಡಿದ್ದರು. ಜನದಟ್ಟಣೆ ಕಡಿಮೆ ಮಾಡಲು ಬೆಟ್ಟ ಹತ್ತಲು 2 ದಿನ ಅವಕಾಶ ನೀಡಲು ಸಮಿತಿ ತಿರ್ಮಾನ ಕೈಗೊಂಡಿದೆ. ‘ನರಕ ಚತುದರ್ಶಿ ಹಿಂದಿನ ದಿನ ಬೆಳಿಗ್ಗೆ ದೇವಿಯ ವಿಗ್ರಹವನ್ನು ಬೆಟ್ಟದ ತುದಿಯಲ್ಲಿ ಪ್ರತಿಷ್ಠಾಪಿಸಲು ತೀರ್ಮಾನಿಸಲಾಗಿದೆ. ಮುಂದಿನ ವರ್ಷದಿಂದ ಭಕ್ತರಿಗೆ ಬೆಟ್ಟ ಹತ್ತಲು 2 ದಿನ ಅವಕಾಶ ದೊರೆಯಲಿದೆ’

Leave a Reply

Your email address will not be published. Required fields are marked *

error: Content is protected !!