
ಉದಯವಾಹಿನಿ,ಚಿಂಚೋಳಿ: ತಾಲ್ಲೂಕಿನಲ್ಲಿ ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ 10ನೇ ತಾಲ್ಲೂಕಾ ಕನ್ನಡ ಸಾಹಿತ್ಯ ಸಮ್ಮೇಳನವು ಇದೆ ನವ್ಹಂಬರ್ 08ರಂದು ಹಮ್ಮಿಕೊಂಡಿದ್ದು ಎಲ್ಲಾ ಕನ್ನಡ ಅಭಿಮಾನಿಗಳು ಸಂಘ ಸಂಸ್ಥೆಗಳು ಕನ್ನಡ ಪರ ಸಂಘಟನೆಗಳು ಸಾಹಿತಿಗಳು ಕವಿಗಳು ಶಿಕ್ಷಕರು ಜನಪ್ರತಿನಿಧಿಗಳು ಎಲ್ಲೋರು ಒಗ್ಗೂಡಿ ಕನ್ನಡ ಸಾಹಿತ್ಯ ಸಮ್ಮೇಳನವು ಯಶಸ್ವಿಗೊಳಿಸಬೇಕು ಎಂದು ನರನಾಳ ಸುಕ್ಷೇತ್ರದ ಪೂಜ್ಯ ಶ್ರೀ ಷ.ಬ್ರ.ಶಿವಕುಮಾರ ಶಿವಾಚಾರ್ಯರು ಕರೆ ನೀಡಿದರು.ತಾಲ್ಲೂಕಿನ ನರನಾಳದ ಮಠದಲ್ಲಿ ಆಮಂತ್ರಣ ಪತ್ರ ಬಿಡುಗಡೆ ಮಾಡಿ ಮಾತನಾಡಿದ ಅವರು,ಚಿಂಚೋಳಿ ತಾಲ್ಲೂಕಾವು ಆಂದ್ರಪ್ರದೇಶ ಮತ್ತು ತೆಲಂಗಾಣ ಗಡಿಭಾಗವಾಗಿದ್ದು ಇಲ್ಲಿ ಬಹಳಷ್ಟು ತೆಲುಗು ಭಾಷೆಯ ಪ್ರಭಾವ ಹೆಚ್ಚಿದ್ದು ಕಾರಣ ಕನ್ನಡ ಸಾಹಿತ್ಯ ಸಮ್ಮೇಳನ ಅತ್ಯಂತ ವಿಜೃಂಭಣೆಯಿಂದ ಆಚರಣೆ ಮಾಡಿ ಕನ್ನಡವೇ ನಿತ್ಯ ಕನ್ನಡವೇ ಸತ್ಯ ಕನ್ನಡದ ಹಿರಿಮೆ ಗಿರಿಮೆ ಬೆಳೆಸಬೇಕು.ಕನ್ನಡ ಸಾಹಿತ್ಯ ಸಮ್ಮೇಳನ ಯಶಸ್ವಿಯಾಗಲು ತಾಲ್ಲೂಕಾ ಆಡಳಿತದಿಂದ ಹಿಡಿದು ಕ್ಷೇತ್ರದ ಪ್ರತಿಯೋಬ್ಬರು ಒಗ್ಗಟ್ಟಾಗಿ ಕನ್ನಡದ ಹಿರಿಮೆ ಕನ್ನಡ ನಾಡು ನುಡಿ ಪಸರಿಸುವಂತೆ ಮಾಡಿ ಕನ್ನಡ ಸಾಹಿತ್ಯ ಸಮ್ಮೇಳನವು ಜಾತ್ರೆಯಂತೆ ಮಾಡಬೇಕು ಎಂದರು.ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಮಾತನಾಡಿ ಈಗಾಗಲೇ ಕನ್ನಡ ಸಾಹಿತ್ಯ ಸಮ್ಮೇಳ ಕಾರ್ಯಕ್ರಮ ನಡೆಸಲು ಎಲ್ಲಾ ಸಿದ್ಧತೆಕಾರ್ಯಗಳು ಕೈಗೊಳ್ಳಲಾಗಿದ್ದು ಈ ಬಾರಿ ಅತ್ಯಂತ ಅರ್ಥಪೂರ್ಣವಾಗಿ ಆಚರಣೆ ಮಾಡಲು ಸಿದ್ಧತೆ ಮಾಡಿದ್ದು ಪೂಜ್ಯರಾದ ತಾವು ಕಾರ್ಯಕ್ರಮಕ್ಕೆ ತಪ್ಪದೆ ಆಗಮಿಸಬೇಕು ಎಂದರು. ಪೂಜ್ಯರಿಗೆ ಆಮಂತ್ರಣ ಪತ್ರ ನೀಡಿ ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿ ಲಕ್ಷ್ಮಣ ಆವುಂಟಿ,ಕಸಾಪ ಪ್ರಧಾನ ಕಾರ್ಯದರ್ಶಿ ಶಿವರಾಜ ವಾಲಿ,ಯಲ್ಲಾಲಿಂಗ ದಂಡಿನ್,ಚಾಂದಪಾಷ,ಮಲ್ಲಯ್ಯಸ್ವಾಮಿ, ನಾಗಯ್ಯ,ಸಿದ್ದಯ್ಯಸ್ವಾಮಿ,ರಾಜೇಂದ್ರ ತಾಜಲಾಪೂರ,ಸಂತೋಷ ಪಟರಡ್ಡಿ,ಅನೇಕರಿದ್ದರು.
