ಉದಯವಾಹಿನಿ, ಬೆಂಗಳೂರು: ಆರೋಗ್ಯ ಬಂಧು ಯೋಜನೆಯನ್ನು 19 ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲಿ ಜಾರಿಗೊಳಿಸಲಾಗಿತ್ತು. ಈ ಯೋಜನೆಯನ್ನು ಮುಂದಿನ ಒಂದು ತಿಂಗಳು ವಿಸ್ತರಿಸಿ ಸರ್ಕಾರ ಆದೇಶಿಸಿದೆ.ಈ ಕುರಿತಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸೇವೆಗಳ ಆಯುಕ್ತರು ಆಯಾ ಜಿಲ್ಲೆಯ ಡಿಹೆಚ್‌ಓಗಳಿಗೆ ಪತ್ರ ಬರೆದು ತಿಳಿಸಿದ್ದಾರೆ.ಆ ಪತ್ರದಲ್ಲಿ ಆರೋಗ್ಯ ಬಂಧು ಯೋಜನೆಯಡಿ ಅರ್ಹತಾ ಮಾನದಂಡಗಳನ್ನು ಪೂರೈಸಿರುವ 12 ಪ್ರಾಥಮಿಕ ರೋಗ್ಯ ಕೇಂದ್ರಗಳನ್ನು ಮಾತ್ರ ಮುಂದುವರೆಸುವಂತೆ ಹಾಗೂ ಉಳಿದ ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಗುತ್ತಿಗೆ ಅವಧಿ ಮುಕ್ತಾಯಗೊಂಡ ತಕ್ಷಣ ಇಲಾಖೆಯ ವಶಕ್ಕೆ ಪಡೆದು ನಿರ್ವಹಿಸುವಂತೆ ಈ ಹಿಂದೆ ಆದೇಶಿಸಲಾಗಿತ್ತು ಎಂದಿದ್ದಾರೆ.ದಿನಾಂಕ 09-12-2022ರ ಆದೇಶದಲ್ಲಿ ಈಗಾಗಲೇ ಮುಂದುವರೆಸಲಾದ 12 ಹಾಗೂ ಹೆಚ್ಚುವರಿಯಾಗಿ 8 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಒಟ್ಟು 20 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಪರಿಷ್ಕೃತ ಆರೋಗ್ಯ ಬಂಧು ಯೋಜನೆಯಡಿ ಹೊಸ ಮಾರ್ಗಸೂಚಿಯನ್ನು ಒಳಗೊಂಡೆತೆ ದಿನಾಂಕ 31-03-2023ರವರೆಗೆ ಮುಂದುವರೆಸಲು ಆದೇಶಿಲಾಗಿತ್ತು ಎಂದು ಹೇಳಿದ್ದಾರೆ.
