ಉದಯವಾಹಿನಿ, ಕೆಆರ್ ಪುರ: ಕನ್ನಡ ರಾಜ್ಯೋತ್ಸವ ಕನ್ನಡಿಗರ ಶ್ರೀಮಂತಿಕೆಯ ಪ್ರತೀಕ, ಶಿಲ್ಪಕಲೆಯ ವೈಭವ ,ನಾಡು ನುಡಿಯ ಸಿರಿವಂತಿಕೆ ,ಕವಿ ಸಾಹಿತಿಗಳ ಕೊಡುಗೆ , ನೃತ್ಯ ನಾದಗಳ ಸಮ್ಮಿಲನವೇ ಈ ಕನ್ನಡದಮ್ಮನ ಹಬ್ಬ ಎಂದು ಶಾಸಕಿ ಮಂಜುಳಾ ಲಿಂಬಾವಳಿ ಅವರು ತಿಳಿಸಿದರು .ಮಹದೇವಪುರ ಕ್ಷೇತ್ರದ ವರ್ತೂರಿನ ಗಾಂಧಿ ವೃತ್ತದ ಬಳಿ ಕರ್ನಾಟಕ ರಕ್ಷಣಾ ವೇದಿಕೆ ಸಿಂಹ ಸೈನ್ಯ ವತಿಯಿಂದ ಆಯೋಜಿಸಿದ್ದ ೬೯ನೇ ಕನ್ನಡ ರಾಜ್ಯೋತ್ಸವದಲ್ಲಿ ಪಾಲ್ಗೊಂಡು ಮಾತಾಡಿದರು,
ಕರ್ನಾಟಕದಲ್ಲಿ ನವೆಂಬರ್ ತಿಂಗಳಲ್ಲಿ ಕಾಣುವ ವೈಭವ, ದೇಶದಲ್ಲೇ ಇನ್ನೆಲ್ಲೂ ಕಾಣಲಾಗದ ಸಂಭ್ರಮ ಕನ್ನಡಿಗರದ್ದು, ಕನ್ನಡ ರಾಜ್ಯೋತ್ಸವದ ನೆಲದ ಹೆಸರನ್ನು ಇತಿಹಾಸದಲ್ಲಿ ದಾಖಲಿಸಿದ ಮಹನೀಯರನ್ನು ನೆನೆಯುವ ಕಾರ್ಯ ನಮ್ಮದಾಗಬೇಕು. ನಮ್ಮ ನೆಲದ ಕಲಾ ಸಂಸ್ಕೃತಿ ನೃತ್ಯ ವಾದ್ಯಗಳ ಜೈಕಾರ ಕಲಾಮಂಟಪಗಳ ಸಿಂಗಾರ ಬೇರೆಲ್ಲೂ ಕಾಣಸಿಗದು ಎಂದು ವಿವರಿಸಿದರು .
ಬಳಿಕ ಕರವೇ ಸಿಂಹ ಸೈನ್ಯ ರಾಜ್ಯಾಧ್ಯಕ್ಷ ಶ್ರೀನಿವಾಸ್ ಗೌಡ ಅವರು ಮಾತನಾಡಿ ಕನ್ನಡಮ್ಮನ ವೈಭವ ರಾಜ್ಯಾದ್ಯಂತ ವಿಜೃಂಭಣೆಯಿಂದ ನಡೆಯುತ್ತಿದ್ದು, ಈ ರಾಜ್ಯೋತ್ಸವ ಒಂದು ಆಚರಣೆ ಮಾತ್ರವಾಗದೆ ಸಮಾಜಕ್ಕೆ ಉತ್ತಮ ಸಂದೇಶ ನೀಡುವ ಕಾರ್ಯ ಮಾಡಬೇಕಿದೆ. ಹಾಗಾಗಿ ಈ ರಾಜ್ಯೋತ್ಸವದಲ್ಲಿ ಅನೇಕ ಜನಪರ ಕಾರ್ಯಗಳನ್ನು ಆಯೋಜನೆ ಮಾಡಿದ್ದು , ಊರಿನ ಮುಖಂಡರು ಭಾಗಿಯಾಗಿದ್ದು ನಮ್ಮ ಯೋಜನೆ ಫಲಿಸಿದೆ ಎಂದರು .
