ಉದಯವಾಹಿನಿ, ಕನ್ನಡದ ಎವರ್‌ಗ್ರೀನ್ ಸಿನಿಮಾಗಳಲ್ಲಿ ‘ಪರಸಂಗದ ಗೆಂಡೆತಿಮ್ಮ’ ಕೂಡ ಒಂದು. ಹಿರಿಯ ನಟ ದಿವಂಗತ ಲೋಕೇಶ್ ನಟಿಸಿದ್ದ ಈ ಸಿನಿಮಾದ ಹಾಡುಗಳು ಇಂದಿಗೂ ಫೇಮಸ್. ಇಂದಿನ ಪೀಳಿಗೆ ಕೂಡ ಈ ಹಾಡುಗಳನ್ನು ಗುನುಗುತ್ತಲೇ ಇರುತ್ತಾರೆ. ಇದೇ ಸಿನಿಮಾದಲ್ಲಿ ಲೋಕೇಶ್ ಅವರಿಗೆ ನಾಯಕಿಯಾಗಿ ನಟಿಸಿದವರು ರೀಟಾ ಅಂಚನ್ ರಾಧಾಕೃಷ್ಣ.

ಈ ಜೋಡಿ ಅಂದು ಪ್ರೇಕ್ಷಕರನ್ನು ಮೋಡಿ ಮಾಡಿತ್ತು.

‘ಪರಸಂಗದ ಗೆಂಡೆತಿಮ್ಮ’ ಸಿನಿಮಾದಂತಹ ಸೂಪರ್ ಹಿಟ್ ಸಿನಿಮಾದಲ್ಲಿ ನಾಯಕಿ ರೀಟಾ ಅಂಚನ್ ರಾಧಾಕೃಷ್ಣ ನಟಿಸಿದ್ದರೂ ಕನ್ನಡದಲ್ಲಿ ಹೆಚ್ಚು ದಿನ ಉಳಿದುಕೊಳ್ಳಲಾಗಲಿಲ್ಲ. ಇದೇ ನಟಿ ರೀಟಾ ಅಂಚನ್ ರಾಧಾಕೃಷ್ಣ ಎರಡು ದಿನಗಳ ಹಿಂದೆ ನಿಧನರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ನಿಧನರಾದ ಸುದ್ದಿ ತಡವಾಗಿ ಸಿಕ್ಕಿದೆ.

ರೀಟಾ ಅಂಚನ್ ರಾಧಾಕೃಷ್ಣ ಅವರಿಗೆ 68 ವರ್ಷ ವಯಸ್ಸಾಗಿತ್ತು. ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರು. ಚಿಕಿತ್ಸೆ ಫಲಿಸದೆ ಬುಧವಾರದಂದು (ನವೆಂಬರ್ 13) ಇಹಲೋಕವನ್ನು ತ್ಯಜಿಸಿದ್ದಾರೆ. ಕೆಲವೇ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದರೂ ಚಿತ್ರರಂಗದಲ್ಲಿ ತಮ್ಮದೇ ಚಾಪು ಮೂಡಿಸಿದ್ದರು. ಈ ನಟಿಯ ನಿಧನದ ಸುದ್ದಿಯನ್ನು ನಿರ್ದೇಶಕ ರಘುರಾಮ್ ತನ್ನ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ರೀಟಾ ಅಂಚನ್ ಕನ್ನಡದ ಕೆಲವು ಸಿನಿಮಾಗಳಲ್ಲಿ ನಟಿಸಿದ್ದರೂ, ಅವರನ್ನು ಬಹುತೇಕವಾಗಿ ಗುರುತಿಸುತ್ತಿದ್ದಿದ್ದು ‘ಪರಸಂಗದ ಗೆಂಡೆತಿಮ್ಮ’ ಸಿನಿಮಾದ ಮೂಲಕವೇ. 1978ರಲ್ಲಿ ತೆರೆಕಂಡಿದ್ದ ಈ ಸಿನಿಮಾದಲ್ಲಿ ರೀಟಾ ಅಂಚನ್ ಬೋಲ್ಡ್‌ ರೋಲ್‌ನಲ್ಲಿ ನಟಿಸಿದ್ದರು. ಲೋಕೇಶ್ ಅಂತಹ ದಿಗ್ಗಜರ ಮುಂದೆ ನಟಿಸಿ ರೀಟಾ ಅಂಚನ್ ಪ್ರೇಕ್ಷಕರ ಗಮನ ಸೆಳೆದಿದ್ದರು. ಈಗ ಇವರು ಅನಾರೋಗ್ಯದಿಂದ ಎರಡು ದಿನಗಳ ಹಿಂದೆ ನಿಧನರರಾಗಿದ್ದಾರೆ. ಈ ವಿಷಯವನ್ನು ರಘುರಾಮ್ ತಮ್ಮ ಫೇಸ್‌ ಬುಕ್ ಪೇಜ್‌ನಲ್ಲಿ ಹಂಚಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!