ಉದಯವಾಹಿನಿ, ಬೆಂಗಳೂರು: ದಾಸರಹಳ್ಳಿ ವ್ಯಾಪ್ತಿಯಲ್ಲಿ ಕೈಗೆತ್ತಿಕೊಂಡಿರುವ ಮೂಲಸೌಕರ್ಯ ಕಾಮಗಾರಿ ಶೀಘ್ರವಾಗಿಯೇ ಪೂರ್ಣಗೊಳಿಸಲಾಗವುದು ಎಂದು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿ ನಾಥ್ ಹೇಳಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ ದಾಸರಹಳ್ಳಿ ವಲಯದಲ್ಲಿ ಇಂದು ಮುಖ್ಯ ಆಯುಕ್ತರ ನಡೆ ವಲಯದ ಕಡೆ ಕಾರ್ಯಕ್ರಮದಡಿ ವಿವಿಧ ಸ್ಥಳಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ವೇಳೆ ಅವರು ಮಾತನಾಡಿದರು.
ದಾಸರಹಳ್ಳಿ ವಲಯದ ಅಬ್ಬಿಗೆರೆಯ ಸ್ಮಶಾನಕ್ಕೆ ಕೂಡಲೆ ಕಾಂಪೌಂಡ್ ಗೋಡೆಯನ್ನು ನಿರ್ಮಾಣ ಮಾಡಲು ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ. ಅದೇ ರೀತಿ, ಅಬ್ಬಿಗೆರೆ ಫಾರೆಸ್ಟ್ ರಸ್ತೆಯ ಅಗಲೀಕರಣದ ವೇಳೆ ಸ್ಮಶಾನದ ಗೋಡೆಯನ್ನು ತೆರವುಗೊಳಿಸಲಾಗಿದ್ದು, ಆ ಗೋಡೆಯನ್ನು ಗುತ್ತಿಗೆದಾರರ ಮೂಲಕ ಕೂಡಲೆ ನಿರ್ಮಾಣ ಮಾಡಲು ಸೂಚಿಸಲಾಗಿದೆ ಎಂದರು.

ಅಬ್ಬಿಗೆರೆ ಕೆರೆ ೪೫ ಎಕರೆ ಪ್ರದೇಶದಲ್ಲಿದ್ದು, ೪.೫ ಕೋಟಿ ರೂ. ವೆಚ್ಚದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗಿದೆ. ಆ ಕಾಮಗಾರಿಯಲ್ಲಿ ಈಗಾಗಲೇ ಹೂಳೆತ್ತುವ ಕಾರ್ಯ, ಸೀವೇಜ್ ಡೈವರ್ಷನ್ ಡ್ರೈನ್, ಬಂಡ್ ನಿರ್ಮಿಸುವ, ಇನ್‌ಲೆಟ್ ಹಾಗೂ ಔಟ್ ಲೆಟ್ ಕಾಮಗಾರಿ ಪೂರ್ಣಗೊಳಿಸಲಾಗಿದೆ. ಇನ್ನು ಫೆನ್ಸಿಂಗ್ ಅಳವಡಿಸುವ, ಶೌಚಾಲಯ, ಬದ್ರತಾ ಸಿಬ್ಬಂದಿಯ ಕೊಠಡಿ ಹಾಗೂ ಪ್ರವೇಶ ದ್ವಾರದ ಕಾಮಗಾರಿ ಬಾಕಿಯಿದ್ದು, ತ್ವರಿತವಾಗಿ ಪೂರ್ಣಗೊಳಿಸಲು ಸೂಚನೆ ನೀಡಲಾಗಿದೆ ಎಂದು ಮಾಹಿತಿ ನೀಡಿದರು.  ಕೆರೆಯ ಒಂದು ಭಾಗದ ಕಲ್ವರ್ಟ್ ಮಳೆಗಾಲದ ವೇಳೆ ಕೊಚ್ಚಿ ಹೋಗಿದ್ದು, ಅದರ ದುರಸ್ಥಿ ಕಾಮಗಾರಿಗಾಗಿ ೧.೦೫ ಕೋಟಿ ರೂ. ಅನುದಾನ ಮೀಸಲಿಟ್ಟಿದ್ದು, ಕೂಡಲೆ ಕಾಮಗಾರಿ ಪ್ರಾರಂಭಿಸಿ ಕಲ್ವರ್ಟ್ ಕಾಮಗಾರಿ, ರಾಜಕಾಲುವೆಯ ಆರ್.ಸಿ.ಸಿ ಗೋಡೆ ಸೇರಿದಂತೆ ಇನ್ನಿತರೆ ಕಾಮಗಾರಿಯನ್ನು ಪ್ರಾರಂಭಿಸಿ ನಿಗದೊಯ ಸಮಯದೊಳಗಾಗಿ ಪೂರ್ಣಗೊಳಿಸಲು ಸೂಚಿಸಿದ್ದು,
ಶೆಟ್ಟಿಹಳ್ಳಿಯ ಆರ್.ಕೆ. ಎನ್ ಕ್ಲೇವ್ ಬಳಿ ರಸ್ತೆ ಡಾಂಬರೀಕರಣ ಹಾಕಿರುವುದನ್ನು ಪರಿಶೀಲಿಸಿ, ಸೈಡ್ ಡ್ರೈನ್ ಗೆ ಸರಾಗವಾಗಿ ನೀರು ಹರಿದು ಹೋಗುವ ವ್ಯವಸ್ಥೆ ಮಾಡಲಾಗುವುದು ಎಂದರು.

Leave a Reply

Your email address will not be published. Required fields are marked *

error: Content is protected !!