ಉದಯವಾಹಿನಿ, ಕರ್ನೂಲ್ : ಅಮೆಜಾನ್ ಉದ್ಯೋಗಿ ಮದುವೆ ಮಂಟಪದಲ್ಲಿ ವಧು-ವರರಿಗೆ ಉಡುಗೊರೆ ನೀಡುತ್ತಿದ್ದ ಸಮಯದಲ್ಲಿ ಹೃದಯಾಘಾತವಾಗಿ ವೇದಿಕೆ ಮೇಲೆ ಕುಸಿತು ಬಿದ್ದು ಸಾವನ್ನಪ್ಪಿದ್ದಾನೆ ಈ ಘಟನೆ ಆಂಧ್ರಪ್ರದೇಶದ ಕರ್ನೂಲ್ ಜಿಲ್ಲೆಯ ಪೆನುಮಾಡ ಗ್ರಾಮದಲ್ಲಿ ನಡೆದಿದೆ. ವಧು-ವರರನ್ನು ಅಭಿನಂದಿಸಲು ವೇದಿಕೆಗೆ ಬಂದಿದ್ದ ವಂಶಿ ಎಂಬ ಯುವಕ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.ಜನರು ತಕ್ಷಣ ಅವನನ್ನು ಡಾನ್ ಸಿಟಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ, ಅಲ್ಲಿ ವೈದ್ಯರು ಅವರು ಸಾವನ್ನಪ್ಪಿದ್ದಾರೆ ಎಂದು ಹೇಳಿದ್ದಾರೆ.
ಈ ಘಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಘಟನೆ ವೇಳೆ ವಧು-ವರರು ಹಾಗೂ ಅವರ ಸಂಬಂಧಿಕರು ವೇದಿಕೆಯಲ್ಲಿದ್ದರು. ೨೫ ವರ್ಷದ ವಂಶಿ ತನ್ನ ಸ್ನೇಹಿತನ ಮದುವೆಯಲ್ಲಿ ಪಾಲ್ಗೊಳ್ಳಲು ಬೆಂಗಳೂರಿನಿಂದ ಕರ್ನೂಲಿನ ಪೆನುಮಾಡ ಗ್ರಾಮಕ್ಕೆ ಬಂದಿದ್ದ.ವಂಶಿ ಬೆಂಗಳೂರಿನ ಇ-ಕಾಮರ್ಸ್ ಕಂಪನಿ ಅಮೆಜಾನ್‌ನಲ್ಲಿ ಕೆಲಸ ಮಾಡುತ್ತಿದ್ದ ಎನ್ನಲಾಗಿದೆ.
ಭಾರತದಲ್ಲಿ ಯುವಕರಲ್ಲಿ ಹೃದಯ ಸ್ತಂಭನ ಮತ್ತು ಹೃದಯಾಘಾತ ಪ್ರಕರಣಗಳು ವೇಗವಾಗಿ ಹೆಚ್ಚುತ್ತಿವೆ ಎಂಬುದು ವೈದ್ಯರ ಹೇಳಿಕೆ.
ಭಾರತದಲ್ಲಿ ಹೃದ್ರೋಗದ ಹೆಚ್ಚಳದ ಹಿಂದೆ ಮಧುಮೇಹ, ಜೀವನಶೈಲಿ, ವಾಯು ಮಾಲಿನ್ಯ, ಒತ್ತಡ, ಅತಿಯಾದ ವ್ಯಾಯಾಮ ಮತ್ತು ಸ್ಟೆರಾಯ್ಡ್ ಬಳಕೆ ಮುಂತಾದ ಹಲವು ಕಾರಣಗಳಿವೆ. ಭಾರತೀಯರು ಹೃದ್ರೋಗಕ್ಕೆ ಹೆಚ್ಚು ಒಳಗಾಗುತ್ತಾರೆ ಎಂದು ತಜ್ಙರು ವಿಶ್ಲೇಷಿಸಿದ್ದಾರೆ.
