ಉದಯವಾಹಿನಿ, ಬಾಗೇಪಲ್ಲಿ: ಸಿಪಿಎಂನ ಚಿಕ್ಕಬಳ್ಳಾಪುರ ಜಿಲ್ಲಾ ಮಟ್ಟದ 18ನ ಸಮ್ಮೇಳನವು ಗುರುವಾರ ಬಾಗೇಪಲ್ಲಿ ಪಟ್ಟಣದಲ್ಲಿ ಅದ್ದೂರಿಯಾಗಿ
ಸಮ್ಮೇಳನದ ಅಂಗವಾಗಿ ಪಟ್ಟಣದ ಮುಖ್ಯ ರಸ್ತೆಯಲ್ಲಿ ಸಿಪಿಎಂ ಮುಖಂಡರು ಮತ್ತು ಕಾರ್ಯಕರ್ತರು ಕೆಂಪು ಬಾವುಟ ಹಿಡಿದು ಬೃಹತ್ ಮೆರವಣಿಗೆ ನಡೆಸಿದರು.ಕ್ಯಾಲಿಯಲ್ಲಿ ಕೃಷಿ ಕೂಲಿ ಕಾರ್ಮಿಕರು, ಜನಸಾಮಾನ್ಯರು ಭಾಗವಹಿಸಿದ್ದರು.

ತಾಲ್ಲೂಕಿನ ತೊಂಡಂವಾರಿಪಲ್ಲಿಯಲ್ಲಿ ಹಮ್ಮಿಕೊಂಡ ಸಿಪಿಎಂ ಜಿಲ್ಲಾ 18ನೇ ಸಮ್ಮೇಳನದ ಅಂಗವಾಗಿ ಪಟ್ಟಣದ ಸಿಪಿಎಂ ಪಕ್ಷದ ಸುಂದರಯ್ಯ ಭವನದ ಮುಂದೆ ನೂರಾರು ಮಂದಿ ಜಮಾಯಿಸಿದರು. ಬಾಗೇಪಲ್ಲಿ ಗುಡಿಬಂಡೆ ತಾಲ್ಲೂಕುಗಳು ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಿಂದ ಕಮ್ಯೂನಿಸ್ಟ್ ಮುಖಂಡರು, ಕಾರ್ಯಕರ್ತರು ಆಗಮಿಸಿದ್ದರು. ಮೆರವಣಿಗೆಯಲ್ಲಿ ಪ್ರಜಾ ನಾಟ್ಯ ಕಲಾ ಮಂಡಲಿ ಕಲಾವಿದರು ಹೆಗಲ ಮೇಲೆ ಕಪ್ಪು ಶಾಲು ಹಾಕಿಕೊಂಡು ತಲೆಗೆ ಹಾಗೂ ಕೈಯಲ್ಲಿ ತಂಪು ಬಾವುಟಗಳನ್ನು ಹಿಡಿದು, ಮರವಣಿಗೆಯುದ್ದಕ್ಕೂ ನೃತ್ಯ ಮಾಡುತ್ತಾ
ಕೆಂಪು ವಸ್ತ್ರಧಾರಿಗಳು, ಕಾರ್ಯಕರ್ತರು ಕೈಯಲ್ಲಿ ಕೆಂಪು ಬಾವುಟ ಹಿಡಿದಿದ್ದರು. ಲಾಲ್ ಸಲಾಂ ಎಂದು ಘೋಷಣೆ ಕೂಗಿದರು.

ಪಟ್ಟಣದ ಸುಂದರಯ್ಯ ಭವನದಿಂದ ಡಾ.ಎನ್.ವೃತ್ತದವರೆಗೆ ಡಿವಿಜಿ ಮುಖ್ಯರಸ್ತೆಯಲ್ಲಿ ಬೃಹತ್ ರಾಲಿ ಮಾಡಲಾಯಿತು. ಮೆರವಣಿಗೆಯಲ್ಲಿ ಸಿಪಿಎಂ ಪೊಲಿಟ್ ಬ್ಯೂರೊ ಸದಸ್ಯ ಬಿ.ವಿ.ರಾಘವುಲು, ಕೇಂದ್ರ ಸಮಿತಿ ಸದಸ್ಯ ಕೆ.ಎನ್.ಉಮೇಶ್, ರಾಜ್ಯ ಕಾರ್ಯದರ್ಶಿ ಯು.ಬಸವರಾಜು ಸೇರಿದಂತೆ ಜಿಲ್ಲಾ, ತಾಲ್ಲೂಕು ಸಮಿತಿಗಳ ಮುಖಂಡರು ಹಾಜರಿದ್ದರು.

Leave a Reply

Your email address will not be published. Required fields are marked *

error: Content is protected !!