ಉದಯವಾಹಿನಿ, ಮೈಸೂರು: ಮೈಸೂರಿನ ಆಲನಹಳ್ಳಿ ಸಮೀಪದಲ್ಲಿ 3.5 ಎಕರೆ ಸ್ಥಳದಲ್ಲಿ ಎನ್‍ಸಿಸಿ ಅಕಾಡೆಮಿ ನಿರ್ಮಿಸಲು ರಾಜ್ಯ ಸರ್ಕಾರ 25 ಕೋಟಿ ರೂ.ಅನುದಾನ ನೀಡಬೇಕು ಎಂದು ಲೆಫ್ಟಿನೆಂಟ್ ಕರ್ನಲ್ ರೋಹಿತ್ ಠಾಕೂರ್ ಹೇಳಿದರು.
ನಗರದ ಖಾಸಗಿ ಹೋಟೆಲ್‍ನಲ್ಲಿ ಮೈಸೂರು ಎನ್‍ಸಿಸಿ 4 ಕೆಎಆರ್-ಏರ್ ಸ್ಕ್ವಾಡ್ರನ್ ಅಲುಮ್ನಿ ಸಂಘದಿಂದ ಭಾನುವಾರ ನಡೆದ 76ನೇ ಎನ್‍ಸಿಸಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಅವರು, ಅಕಾಡೆಮಿಯ 500 ಕೆಡೆಟ್‍ಗಳ ತರಬೇತಿಗೆ ಅಗತ್ಯ ಸೌಲಭ್ಯ ಹೊಂದುವಂತೆ ನಿರ್ಮಾಣವಾಗಬೇಕು. ಇಂದು ಡ್ರೋನ್ ತರಬೇತಿ ರಕ್ಷಣಾ ವಿಭಾಗದಲ್ಲಿ ಮಹತ್ವದ ಪಾತ್ರ ವಹಿಸುತ್ತಿದೆ. ಮೈಸೂರು ಭಾಗಕ್ಕೆ ಡ್ರೋನ್ ಸ್ಕೂಲ್ ನಿರ್ಮಾಣಕ್ಕೆ ಅವಕಾಶ ದೊರೆತಿದ್ದು, ಇದರ ಮೂಲ ಸೌಕರ್ಯವೂ ಅಕಾಡೆಮಿಯಲ್ಲಿ ನಿರ್ಮಾಣವಾದರೆ ರಾಜ್ಯಕ್ಕೆ ಒಂದು ಉತ್ತಮ ಸಂಸ್ಥೆ ದೊರೆತಂತಾಗುತ್ತದೆ ಎಂದರು.ವ್ಯವಸ್ಥೆ ಅನುಷ್ಠಾನಕ್ಕೆ ಬರಬೇಕಾದರೆ ರಾಜಕೀಯ ಇಚ್ಛಾಶಕ್ತಿ ಬೇಕಾಗುತ್ತದೆ. ಅಕಾಡೆಮಿಗೆ ಮೂಲಸೌಲಭ್ಯ ಕಾರ್ಯಗತಗೊಳಿಸಲು ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಅವರನ್ನು ಭೇಟಿಯಾಗಲಿದ್ದೇವೆ. ಅಲುಮ್ನಿ ಸಂಘದವರೂ ಈ ಬಗ್ಗೆ ರಾಜಕೀಯ ಒತ್ತಡ ತರಬೇಕು ಎಂದು ಮನವಿ ಮಾಡಿದರು.
