
ಉದಯವಾಹಿನಿ, ಪಾವಗಡ: ಪಟ್ಟಣದ ಹಿಂದೂಪುರ ರಸ್ತೆ ಗೃಹ ನಿರ್ಮಾಣ ಮಂಡಳಿ ಬಳಿ ಭಾನುವಾರ ರಾತ್ರಿ ಎರಡು ವರ್ಷದ ಚಿರತೆಯೊಂದು ಬೋನಿಗೆ ಬಿದ್ದಿದೆ. ಈ ಚಿರತೆಯು ದಾಳಿ ಮಾಡಿ ನಾಯಿಗಳನ್ನು ಹೊತ್ತೊಯ್ಯುತ್ತಿತ್ತು. ಮೆನಗಳ ಬಳಿ ಓಡಾಡುತ್ತಿದೆ ಎಂದು ಇಲ್ಲಿನ ನಿವಾಸಿಗಳು ದೂರು ನೀಡಿದರು. ಚಾಮರಾಜ ನಗರ ಚಿಕ್ಕಮಗಳೂರು ಕಳೆದ ಎರಡು ತಿಂಗಳಿಂದ ಚಿರತೆಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಬೋನು ಇರಿಸಿದ್ದರು. ಭಾನುವಾರ ರಾತ್ರಿ ಚಿರತೆ ಬೋನಿಗೆ ಬಿದ್ದ ಕೂಡಲೇ, ಚಿರತೆ ನೋಡಲು ಜನರು ತಂಡೋಪ ತಂಡವಾಗಿ ಸ್ಥಳಕ್ಕೆ ಭೇಟಿ ನೀಡಿದರು. ಚಿತ್ರದುರ್ಗ ದಾವಣಗೆರೆ ಧಾರಾವಾಡ ಗದಗ అడు ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ ಚಿರತೆಯನ್ನು ರಾತ್ರಿಯ ಬೇರೆಡೆಗೆ ಸ್ಥಳಾಂತರಿಸಿದರು. ವಲಯ ಅರಣ್ಯ ಇಲಾಖೆ ಆರ್‌ಎಫ್‌ಒ ರಾಕೇಶ್, ಡಿಆರ್‌ಎಫ್‌ಒ, ಬಸವರಾಜು, ಅರಣ್ಯ ರಕ್ಷಕ ಹಸನ್ ಬಾಷಾ, ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
