ಉದಯವಾಹಿನಿ, ಪೀಣ್ಯ ದಾಸರಹಳ್ಳಿ : ದಾಸನಪುರ ಹೋಬಳಿ, ತಮ್ಮೇನಹಳ್ಳಿ ಪಾಳ್ಯದ ಶಿವತೆನಗರ ಶ್ರೀ ಮಲ್ಲೇಶ್ವರ ಸ್ವಾಮಿ ದೇವಾಲಯದಲ್ಲಿ ಕಡೆ ಕಾರ್ತಿಕ ಸೋಮವಾರದ ಅಂಗವಾಗಿ ಹಮ್ಮಿಕೊಂಡಿದ್ದ ದೀಪೋತ್ಸವ ಕಾರ್ಯಕ್ರಮ ಅದ್ಧೂರಿಯಾಗಿ ನೆರವೇರಿತು.
ದೇವಾಲಯದ ಸುತ್ತಮುತ್ತಲಿನ ಬಿಜಿಎಸ್ ಲೇಔಟ್, ಆರ್ ಸಿ ಲೇಔಟ್ ,ಶಿವತೇಜನಗರ, ಓಂ ಸಾಯಿ ನಗರ ಹಾಗೂ ತಮ್ಮೇನಹಳ್ಳಿ ಪಾಳ್ಯ ಮತ್ತು ಕುದುರೆಗೆರೆ ಗ್ರಾಮಗಳ ಸಹಸ್ರಾರು ಭಕ್ತಾದಿಗಳು ದೀಪೋತ್ಸವ ಕಾರ್ಯಕ್ರಮದಲ್ಲಿ ಭಾಗವಹಿಸಿ ದೀಪಗಳನ್ನು ಬೆಳಗುವ ಮೂಲಕ ಸ್ವಾಮಿಗೆ ತಮ್ಮ ಭಕ್ತಿಯನ್ನು ಸಮರ್ಪಿಸಿದರು. ಸದರಿ ದೇವಾಲಯದಲ್ಲಿ ಇದು ಪ್ರಥಮ ವರ್ಷದ ದೀಪೋತ್ಸವ ಕಾರ್ಯಕ್ರಮವಾಗಿದ್ದು ಮೊದಲನೇ ವರ್ಷವಾದ ಈ ಬಾರಿ ೫೦೦೧ ದೀಪಗಳನ್ನು ಬೆಳಗಿಸಲಾಯಿತು. ಜೊತೆಗೆ ಅನ್ನ ದಾಸೋಹ ಸಂಪತರ್ಪಣೆ ನಡೆಯಿತು.
