ಉದಯವಾಹಿನಿ, ಧರ್ಮಸ್ಥಳ: ಉಜಿರೆಯಲ್ಲಿರುವ ಎಸ್‌ಡಿಎಂ ಆಸ್ಪತ್ರೆಯಲ್ಲಿ ಮುಂದಿನ ವರ್ಷ ಜನವರಿ ಒಂದರಿಂದ ಉಚಿತ ಡಯಾಲಿಸಿಸ್‌ ವ್ಯವಸ್ಥೆ ಇರಲಿದೆ ಎಂದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ತಿಳಿಸಿದರು.
ಧರ್ಮಸ್ಥಳ ಲಕ್ಷ ದೀಪೋತ್ಸವದ ಅಂಗವಾಗಿ ಶುಕ್ರವಾರ ಸಂಜೆ ನಡೆದ ಸರ್ವಧರ್ಮ ಸಮ್ಮೇಳನದ 92ನೇ ಅಧಿವೇಶನದ ಉದ್ಘಾಟನಾ ಸಮಾರಂಭದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡಿದ ಅವರು ಉಚಿತ ಡಯಾಲಿಸಿಸ್‌ಗೆ ವರ್ಷಕ್ಕೆ ಅಂದಾಜು ₹1 ಕೋಟಿ ವೆಚ್ಚ ಆಗಲಿದೆ ಎಂದರು.

ಒಂದು ಧರ್ಮದ ವೈಶಿಷ್ಟ್ಯವನ್ನು ಮತ್ತೊಂದು ಧರ್ಮದವರು ತಿಳಿದಾಗ ಸಮಾಜದಲ್ಲಿ ಶಾಂತಿ ನೆಲೆಸುತ್ತದೆ. ಇಲ್ಲದಿದ್ದರೆ ತಿಕ್ಕಾಟ ನಡೆಯುತ್ತದೆ ಎಂದ ಅವರು ಧರ್ಮವನ್ನು ವಿಶಾಲ ದೃಷ್ಟಿಯಿಂದ ನೋಡುವಂತೆ ಮಾಡುವುದೇ ಸರ್ವಧರ್ಮ ಸಮ್ಮೇಳನದ ಉದ್ದೇಶ ಎಂದರು. ಧರ್ಮದ ಬಗ್ಗೆ ಸಾಕಷ್ಟು ತಿಳಿದಿದ್ದರೂ ಜೀವನದಲ್ಲಿ ಅಳವಡಿಸದೇ ಇರುವುದು ಸಮಸ್ಯೆಗಳಿಗೆ ಕಾರಣ ಎಂದು ಅವರು ಅಭಿಪ್ರಾಯಪಟ್ಟರು. ಧರ್ಮವನ್ನು ಅನುಸರಿಸಿದರೆ ಕ್ಷೇಮ ಎಂದು ಅವರು ಹೇಳಿದರು. ಸಂಶೋಧಕ, ಬೆಂಗಳೂರಿನ ಜಿ.ಬಿ.ಹರೀಶ, ನಿವೃತ್ತ ಪ್ರಾಂಶುಪಾಲ, ಮಡಂತ್ಯಾರಿನ ಜೋಸೆಫ್ ಎನ್.ಎಂ ಹಾಗೂ ವಿಜಯಪುರದ ಶಿಕ್ಷಕ ಮೆಹತಾಬ್ ಇಬ್ರಾಹಿಂ ಸಾಬ್ ಕಾಗವಾಡ ಉಪನ್ಯಾಸ ನೀಡಿದರು. ಮಂಜೂಷಾ ವಸ್ತು ಸಂಗ್ರಹಾಲಯಕ್ಕೆ ಲಭಿಸಿದ ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ಪ್ರಮಾಣಪತ್ರವನ್ನು ಮುಖ್ಯ ತೀರ್ಪುಗಾರ ಪ್ರದೀಪ್ ಭಾರದ್ವಾಜ್ ಧರ್ಮಾಧಿಕಾರಿಗೆ ಹಸ್ತಾಂತರಿಸಿದರು.

Leave a Reply

Your email address will not be published. Required fields are marked *

error: Content is protected !!