ಉದಯವಾಹಿನಿ, ಮಂಗಳೂರು: ‘ಬಾಂಗ್ಲಾದಲ್ಲಿ ಹಿಂದೂಗಳ ಮೇಲೆ ದೌರ್ಜನ್ಯ ನಿಲ್ಲದಿದ್ದರೆ, ನಮ್ಮ ದೇಶದಲ್ಲಿರುವ ಬಾಂಗ್ಲಾದೇಶಿಯರಿಗೆ ಸಂಕಷ್ಟ ಎದುರಾಗಬಹುದು’ ಎಂದು ಶ್ರೀಧಾಮ ಮಾಣಿಲದ ಮೋಹನದಾಸ ಸ್ವಾಮೀಜಿ ಹೇಳಿದರು. ಬಾಂಗ್ಲಾದೇಶದಲ್ಲಿ ಹಿಂದೂಗಳ ರಕ್ಷಣೆಗೆ ಆಗ್ರಹಿಸಿ ಹಾಗೂ ಅಲ್ಲಿ ಬಂಧನಕ್ಕೊಳಗಾಗಿರುವ ಇಸ್ಕಾನ್‌ನ ಸಂತ ಚಿನ್ಮಯ್ ಕೃಷ್ಣದಾಸ್ ಪ್ರಭು ಬಿಡುಗಡೆಗೆ ಒತ್ತಾಯಿಸಿ ವಿಶ್ವಹಿಂದೂ ಪರಿಷತ್ ಮತ್ತು ಬಜರಂಗದಳದ ವತಿಯಿಂದ ಇಲ್ಲಿ ಶುಕ್ರವಾರ ಏರ್ಪಡಿಸಿದ್ದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.

‘ಶಾಂತಿ, ಸೌಹಾರ್ದ, ಮಾನವೀಯತೆ ಸಾರುವ ಇಸ್ಕಾನ್ ಸಂತರ ಬಂಧನದ ವಿರುದ್ಧ ಸಂತರಲ್ಲ ಧ್ವನಿ ಎತ್ತಿದ್ದೇವೆ. ಬಾಂಗ್ಲಾದ ಪರಿಸ್ಥಿತಿ ಕಂಡಾದರೂ ಹಿಂದೂಗಳು ಎಚ್ಚೆತ್ತು ಒಗ್ಗಟ್ಟಾಗಬೇಕು. ಪ್ರಪಂಚದಲ್ಲಿ ಎಲ್ಲೂ ಹಿಂದೂಗಳಿಗೆ ತೊಂದರೆಯಾಗದಿರಲಿ ಎಂದು ದೇವಸ್ಥಾನ, ಮಠ, ಭಜನಾ ಮಂದಿರಗಳಲ್ಲಿ ಪ್ರಾರ್ಥಿಸಬೇಕು’ ಎಂದರು. ವಿಎಚ್‌ಪಿಯ ಕರ್ನಾಟಕ ದಕ್ಷಿಣ ಪ್ರಾಂತ ಕಾರ್ಯಾಧ್ಯಕ್ಷ ಪ್ರೊ.ಎಂ.ಬಿ.ಪುರಾಣಿಕ್, ‘ ಬಾಂಗ್ಲಾ ಸ್ವತಂತ್ರವಾದಾಗ ಅಲ್ಲಿ ಶೇ.37ರಷ್ಟಿದ್ದ ಹಿಂದೂಗಳ ಸಂಖ್ಯೆ ಈಗ ಶೇ 7.5ಕ್ಕೆ ಇಳಿದಿದೆ. ಅಲ್ಲಿನ ಕೆಲವು ಹಿಂದೂ ಕುಟುಂಬಗಳು ಒಂದೋ ಮತಾಂತರಗೊಂಡಿವೆ ಅಥವಾ ದೇಶವನ್ನೇ ತೊರೆದಿವೆ.

ಭಾರತದಲ್ಲಿರುವ ಬಾಂಗ್ಲಾ ನುಸುಳುಕೋರರ ವಿರುದ್ಧ ಹಿಂದೂಗಳು ತಿರುಗಿಬಿದ್ದರೆ ಏನಾಗಬಹುದು’ ಎಂದು ಪ್ರಶ್ನಿಸಿದರು. ವಿಎಚ್‌ಪಿಯ ಪ್ರಾಂತ ಸಹ ಕಾರ್ಯದರ್ಶಿ ಶರಣ್ ಪಂಪ್‌ವೆಲ್, ‘ಮತಾಂಧರಿಗೆ ಅಧಿಕಾರ ದೊರೆತರೆ ಏನಾಗಬಹುದು ಎಂಬುದಕ್ಕೆ ಬಾಂಗ್ಲಾ ಉದಾಹರಣೆ. ಅಲ್ಲಿನ ಹಿಂಸಾಚಾರವನ್ನು ಕಂಡೂ ವಿಶ್ವಸಮುದಾಯ ಬಾಯಿಗೆ ಬೀಗ ಹಾಕಿ ಕುಳಿತಿದೆ. ವಿಶ್ವಸಂಸ್ಥೆಯೂ ಮಾತನಾಡುತ್ತಿಲ್ಲ. ಚರ್ಚ್ ದಾಳಿ ವೇಳೆ ಅಮೆರಿಕದ ಅಧ್ಯಕ್ಷರೇ ಮಾತನಾಡಿದ್ದರು. ನಮ್ಮಲ್ಲಿನ ಬುದ್ಧಿಜೀವಿಗಳು, ಜಾತ್ಯಾತೀತರು ಈಗ ಎಲ್ಲಿದ್ದಾರೆ’ ಎಂದು ಪ್ರಶ್ನಿಸಿದರು ‘ಬಾಂಗ್ಲಾದಲ್ಲಿ ಅಲ್ಪಸಂಖ್ಯಾತರ ಮೇಲಿನ ಸೌರ್ಜನ್ಯ ತಡೆಯಲು ವಿಶ್ವಸಂಸ್ಥೆ ಮಧ್ಯಪ್ರವೇಶ ಮಾಡಬೇಕು.

Leave a Reply

Your email address will not be published. Required fields are marked *

error: Content is protected !!