ಉದಯವಾಹಿನಿ, ಮಹಾರಾಷ್ಟ್ರ : ಕುಡಿದ ವ್ಯಕ್ತಿಯೊಬ್ಬ ಕಿರುಕುಳ ನೀಡಿದ ಆರೋಪ ಮಹಿಳೆಯೊಬ್ಬರು ಬಸ್‌ನಲ್ಲಿ ಆತನಿಗೆ 26 ಬಾರಿ ಕಪಾಳಮೋಕ್ಷ ಮಾಡಿದ್ದಾರೆ. ಈ ಘಟನೆ ಪುಣೆಯಲ್ಲಿ ಗುರುವಾರ(ಡಿ.19) ನಡೆದಿದೆ. ಇದೀಗ ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಭಾರೀ ವೈರಲ್ ಆಗಿದೆ. ಶಿರಸಿಯಾ ಶಿಕ್ಷಕಿ ಪ್ರಿಯಾ ಲಷ್ಕರೆ ತನ್ನ ಪತಿ ಮತ್ತು ಮಗನೊಂದಿಗೆ ಬಸ್ ನಲ್ಲು ತೆರಳುತ್ತಿದ್ದಾಗ, ಕುಡಿದ ವ್ಯಕ್ತಿ ಆಮಲಿನಲ್ಲಿ ಪ್ರಿಯಾ ಅವರನ್ನು ಪದೇಪದೆ ನೋಡುತ್ತಿದದ್ದು ಅಲ್ಲದೆ ಅಕೆ ಜತೆ ಅನುಚಿತವಾಗಿ ವರ್ತಿಸಿದ್ದಾನೆ. ಈ ಹಿನ್ನೆಲೆ ಅಕೆ ಅವನಿಗೆ ಹೊಡೆದಿದ್ದಾಳೆ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ ಎಂದು ವರದಿಯಾಗಿದೆ. ವಿಡಿಯೋದಲ್ಲಿ ಏನಿದೆ? ‘ಕುಡಿದ ವ್ಯಕ್ತಿಯೂ ತನ್ನ ಎರಡು ಕೈಗಳನ್ನು ಜೋಡಿಸಿ ಕೈಮುಗಿಯುತ್ತಿದ್ದಾನೆ.
ಕೋಪದಲ್ಲಿರುವ ಮಹಿಳೆ(ಪ್ರಿಯಾ) ಅವನ ಕತ್ತು ಪಟ್ಟಿ (ಅಂಗಿ) ಹಿಡಿದು ಎಡಗೈ ಮತ್ತು ಬಲಗೈ ಒಂದಾದ ನಂತರ ಮತ್ತೊಂದು ಕೈಯಿಂದ ಆತನ ಕೆನ್ನಗೆ ಬಾರಿಸುತ್ತಿದ್ದಾಳೆ. ಒಟ್ಟು 26 ಬಾರಿ ಕನ್ನೆಗೆ ಬಾರಿಸಿದ್ದಾಳೆ. ಅಲ್ಲದೇ, ಸಹ ಪ್ರಯಾಣಿಕರು ಕೂಡ ಹೊಡೆದಿರುವ ದೃಶ್ಯಗಳು ವಿಡಿಯೋ ವೈರಲ್ ಆಗಿದೆ.
