ಉದಯವಾಹಿನಿ, ಲಕ್ಷಾಂತರ ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಿರುವ ಗುಡ್ ವಿಲ್ ಸಂಸ್ಥೆಯ 170ನೇ ವಾರ್ಷಿಕೋತ್ಸವವನ್ನು ಗುಡ್ ವಿಲ್ ಪ್ರೌಢಶಾಲೆ ಹಾಗೂ ಕಾಂಪೋಸಿಟ್ ಪಿಯು ಕಾಲೇಜು ಸಹಯೋಗದಲ್ಲಿ ಇತ್ತೀಚೆಗೆ ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ಉಸ್ತುವಾರಿ ಬಿಷಪ್ ಮಾರ್ಟಿನ್ ಸಿ. ಬೊರ್ಗೋಯಿ ಉದ್ಘಾಟಿಸಿದರು. ನಿವೃತ್ತ ಬಿಷಪ್ ಡಾ. ಪಿ.ಕೆ.ಸ್ಮಾಮಲ್, ಪ್ರಾಂಶುಪಾಲೆ ಜ್ಞಾನಮಣಿ ಫ್ರಾಕ್ಷಿ, ಬೋರ್ಡ್ ನಿರ್ದೇಶಕರು, ಶಿಕ್ಷಕರು, ಸಿಬ್ಬಂದಿ, ಹಳೆಯ ಹಾಗೂ ಈಗಿರುವ ವಿದ್ಯಾರ್ಥಿಗಳು ಹಾಗೂ ಪೋಷಕರು ಪಾಲ್ಗೊಂಡಿದ್ದರು.
