ಉದಯವಾಹಿನಿ, ಬೆಂಗಳೂರು: ಯಾವುದೇ ತನಿಖಾ ಸಂಸ್ಥೆಗಳಾಗಲೀ, ಪೊಲೀಸರಾಗಲೀ ಡಿಜಿಟಲ್ ಅರೆಸ್ಟ್ ಮಾಡುವುದಿಲ್ಲ ಎಂದು ನಗರ ಪೊಲೀಸ್ ಆಯುಕ್ತ ದಯಾನಂದ ಅವರು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕರಲ್ಲಿ ಸೈಬರ್ ಕ್ರೈಂ ಅರಿವು ಮೂಡಿಸುವ ಬಗ್ಗೆ ಮಾತನಾಡಿರುವ ಅವರು, ತನಿಖಾ ಸಂಸ್ಥೆಗಳಾದ ಸಿಬಿಐ, ಇ.ಡಿ ಹಾಗೂ ಮುಂಬೈ, ದೆಹಲಿ ಸೇರಿದಂತೆ ಯಾವುದೇ ಪೊಲೀಸರು ಡಿಜಿಟಲ್ ಅರೆಸ್ಟ್ ಮಾಡವುದಿಲ್ಲ, ಅಂತಹ ಯಾವುದೇ ಕಾನೂನು ಇಲ್ಲ ಎಂದು ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಸೈಬರ್ ವಂಚಕರು ನಿಮ ಖಾಸಗಿ ಮಾಹಿತಿಗಳನ್ನು ಬೇರೆ ಬೇರೆ ಮೂಲಗಳಿಂದ ಪಡೆದುಕೊಂಡು ನಿಮಗೆ ಕರೆ ಮಾಡಿ ಹೆದರಿಸುತ್ತಾರೆ. ನೀವು ಅದನ್ನು ನಿಜವೆಂದು ಹೆದರಿ ನಿಮ ಹಣವನ್ನು ಅವರು ಹೇಳುವ ಖಾತೆಗೆ ಹಾಕಿ ಮೋಸ ಹೋಗುತ್ತೀರ, ಈ ಬಗ್ಗೆ ಎಚ್ಚರದಿಂದಿರಿ ಎಂದು ಅವರು ಸಲಹೆ ಮಾಡಿದ್ದಾರೆ.

ವಂಚಕರು ನಿಮಗೆ ಮೊಬೈಲ್ ಕರೆ ಮಾಡಿ ಡ್ರಗ್ಸ್ ಅಥವಾ ಕಾನೂನು ಬಾಹಿರ ಚಟುವಟಿಕೆ, ಇಲ್ಲವೇ ಮನಿ ಲ್ಯಾಂಡ್ರಿಂಗ್ನಲ್ಲಿ ತೊಡಗಿದ್ದೀರೆಂದು ಹೆದರಿಸಿ ಡಿಜಿಟಲ್ ಅರೆಸ್ಟ್ ಆಗಬೇಕೆಂದು ಬೆದರಿಕೆ ಹಾಕ್ತುತಾರೆ. ನಂತರ ಬೇರೆ ಬೇರೆ ಅಕೌಂಟ್ಗಳಿಗೆ ಹಣ ವರ್ಗಾವಣೆ ಮಾಡಿಸಿಕೊಂಡು ವಂಚನೆ ಮಾಡುತ್ತಿರುವುದು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕಂಡು ಬರುತ್ತಿವೆೆ.

ಅಂತಹ ಕರೆಗಳು ಏನಾದರೂ ಬಂದರೆ ಸಂಪರ್ಕವನ್ನು ಕಡಿತಗೊಳಿಸಿ ಎಂದು ಅವರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.1930ಗೆ ಮಾಹಿತಿ ನೀಡಿ: ಒಂದು ವೇಳೆ ಅಂತಹ ಕರೆಗಳು ಬಂದರೆ ತಕ್ಷಣವೇ ಕರೆ ಕಟ್ಮಾಡಿ 1930ಗೆ ನೇರವಾಗಿ ಕರೆಮಾಡಿ ಅಥವಾ ಸ್ಥಳೀಯ ಪೊಲೀಸ್ ಠಾಣೆಗೆ ಮಾಹಿತಿ ನೀಡಬಹುದು ಎಂದು ಅವರು ಸಲಹೆ ಮಾಡಿದರು.

Leave a Reply

Your email address will not be published. Required fields are marked *

error: Content is protected !!