ಉದಯವಾಹಿನಿ ,ವಾಡಿ,: ಡಾ.ಅಂಬೇಡ್ಕರ್ ಕುರಿತು ಕೇಂದ್ರ ಸಚಿವ ಅಮಿತ್ ಶಾ ಮಾತನಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸಲಾಯಿತು. ನವ ಬೌದ್ಧ ಸಮಾಜ ವತಿಯಿಂದ ಘೋಷಿಸಲಾದ ಬಂದ್ ಕರೆಗೆ ಅಕ್ಷರಶಃ ಪಟ್ಟಣದ ಅಂಗಡಿ ಮುಂಗಟ್ಟುಗಳು ಸ್ವಯಂ ಪ್ರೇರಿತರಾಗಿ ಬಂದ್ ಮಾಡುವ ಮೂಲಕ ಒಗ್ಗಟ್ಟು ಪ್ರದರ್ಶಿಸಿದರು. ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು, ಆಸ್ಪತ್ರೆ ಮತ್ತು ಮೇಡಿಕಲ್ ಗಳು ಎಂದಿನಂತೆ ಕಾರ್ಯ ನಿರ್ವಹಿಸಿದವು. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ನೂರಾರು ಅಂಬೇಡ್ಕರ್ ಅಭಿಮಾನಿಗಳು ಕೇಂದ್ರ ಸಚಿವ ಅಮಿತ್ ಶಾ ವಿರುದ್ಧ ಘೋಷಣೆ ಕೂಗಿ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯದ್ ಮಹೆಮೂದ ಸಾಹೇಬ್ ಮಾತನಾಡಿ, ಕೇಂದ್ರ ಗೃಹ ಅಮಿತ್ ಶಾ ಅವರು ಸಾರ್ವಜನಿಕವಾಗಿ ಕ್ಷಮೆ ಕೇಳಬೇಕು ಅವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿಬೇಕು ಎಂದು ಒತ್ತಾಯಿಸಿದರು.
ನವ ಬೌದ್ಧ ಸಮಾಜದ ಖಜಾಂಚಿ ಚಂದ್ರಸೇನ ಮೆನಗಾರಮಾತನಾಡಿ,ಅಮಿತ್ ಶಾ ಅವರು ಮಾತನಾಡಿರುವುದು ಅಂಬೇಡ್ಕರ್ ಅಭಿಮಾನಿಗಳಿಗೆ ಘಾಸಿ ಗೊಳಿಸಿದೆ. ವಾಡಿಯ ಬೌದ್ಧ ಸಮಾಜ ಹಾಗೂ ಎಲ್ಲಾ ನಾಗರಿಕರು ಅತಿ ಉಗ್ರವಾಗಿ ಖಂಡಿಸುತ್ತೇವೆ ಎಂದರು
ನವ ಬೌದ್ಧ ಸಮಾಜ ಅಧ್ಯಕ್ಷ ಟೋಪಣ್ಣ ಕೋಮಟೆ, ದಲಿತ ಮುಖಂಡ ಸುರೇಶ ಮೆಂಗನ್, ಸ್ಥಳೀಯ ಮುಖಂಡರಾದ ಸೂರ್ಯಕಾಂತ ರದ್ದೇವಾಡಿ, ಶರಣಬಸ್ಸು ಶಿರೂರಕರ್, ಅಲ್ತಾಫ್ ಸೌದಾಗರ್, ದೇವಿಂದ್ರ ಕರದಳ್ಳಿ, ಸಾಲೋಮನ ರಾಜಣ್ಣ, ಸಂದೀಪ ಕಟ್ಟಿ, ಬಸವರಾಜ ಕೇಶವರ, ಸಿದ್ದು ಪೂಜಾರಿ, ಅಬ್ರಹಾಂ, ಈರಣ್ಣ ಎಲಗಟ್ಟಿ ಸೇರಿದಂತೆ ಅನೇಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಶಹಾಬಾದ ಡಿವೈಎಸ್ಪಿ ಶಂಕರಗೌಡ ಪಾಟೀಲ್, ಸಿಪಿಐ ನಟರಾಜ ಲಾಡೆ, ಜಗದೆವಪ್ಪ ಪಾಳ, ವಾಡಿ ಠಾಣೆಯ ಪಿಎಸೈ ತೀರುಮಲೇಶ ಕೆ, ಚೇತನ ಪುಜಾರಿ ಪೆÇಲೀಸ್ ಬಂದೋಬಸ್ ಕಲ್ಪಿಸಿದರು.
