ಉದಯವಾಹಿನಿ, ಬೆಂಗಳೂರು: ಬಿಜೆಪಿ ಪಕ್ಷ ದೇಶ ಮೊದಲು ಎಂದು ರಾಷ್ಟ್ರಭಕ್ತಿ ಕಲಿಸಿದ ಪಕ್ಷ ಎಂದು ದಕ್ಷಿಣ ಜಿಲ್ಲಾ ಬಿಜೆಪಿ ಉಪಾಧ್ಯಕ್ಷ, ನಿಕಟಪೂರ್ವ ಬಿಬಿಎಂಪಿ ಸದಸ್ಯ ಕೆ. ಉಮೇಶ್ ಶೆಟ್ಟಿ ಅವರು ತಿಳಿಸಿದರು. ಗೋವಿಂದರಾಜನಗರ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಜನ ಸಂಪರ್ಕ ಕಚೇರಿಯಲ್ಲಿ ಇಂದು ಹಮ್ಮಿಕೊಂಡಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿರವರ ೧೦೦ನೇ ಹುಟ್ಟುಹಬ್ಬದ ಪ್ರಯುಕ್ತ ಸುಶಾಸನದಿನ, ಅಟಲ್ ಜೀ ಜೀವನ ಚರಿತ್ರೆಯ ಛಾಯಾಚಿತ್ರ ಪ್ರದರ್ಶನ ಉದ್ಘಾಟಿಸಿ ಮಾತನಾಡಿದ ಅವರು,
ಅಜಾತಶತ್ರು, ಸರ್ವಶೇಷ್ಠ ರಾಜಕಾರಣಿ ಅಟಲ್ ಬಿಹಾರಿ ವಾಜಪೇಯಿರವರು ೧೦೦ನೇ ವರ್ಷದ ಹುಟ್ಟುಹಬ್ಬದ ಶುಭಾದಿನವನ್ನು ಸುಶಾಸನ ದಿನವಾಗಿ ಆಚರಿಸಲಾಗುತ್ತಿದೆ ಎಂದರು.
ಅಟಲ್ ಜೀ ಹೆಸರಿನಲ್ಲಿ ಶಕ್ತಿ ಇದೆ, ಮೂರು ಬಾರಿ ದೇಶದ ಪ್ರಧಾನಿಯಾಗಿ ಉತ್ತಮ ಆಡಳಿತ ನೀಡಿದರು. ಕಾಶ್ಮೀರದಿಂದ ಕನ್ಯಾಕುಮಾರಿವರಗೆ ಉತ್ತಮ ರಸ್ತೆಗಳು ಇದೆ ಎಂದರೆ ಅಟಲ್ ಜೀ ನೀಡಿದ ಉತ್ತಮ ಆಡಳಿತ ಕಾರಣ, ಕವಿ, ಸಾಹಿತಿ, ಪತ್ರಕರ್ತ ಶೇಷ್ಠ ರಾಜಕಾರಣಿಯಾಗಿ ದೇಶದ ಸರ್ವತೋಮುಖ ಅಭಿವೃದ್ದಿಗೆ ಶ್ರಮಿಸಿದರು ಎಂದು ತಿಳಿಸಿದರು. ಅಟಲ್ ಜೀರವರು ಕಟ್ಟಿಬೆಳಸಿದ ಪಕ್ಷದಲ್ಲಿ ಲಕ್ಷಾಂತರ ಜನ ಇಂದು ನಾಯಕರಾಗಿ ಹೊರಹೊಮ್ಮಿದ್ದಾರೆ. ಪಕ್ಷ ಕಟ್ಟಲು ನಾಯಕರಿಂದ ಮಾತ್ರ ಸಾಧ್ಯವಿಲ್ಲ, ಕಾರ್ಯಕರ್ತರು ಮುಖ್ಯ. ಗೋವಿಂದರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ ಯಶ್ವಸಿಯಾಗಿ ನೇರವೇರಿದೆ ಎಂದರು.
