ಉದಯವಾಹಿನಿ, ಕೆ.ಆರ್.ಪುರ: ನಾಡಿನೆಲ್ಲೆಡೆ ಕ್ರಿಸ್ಮಸ್ ಹಬ್ಬದ ಅದ್ಧೂರಿಯಾಗಿ ಆಚರಣೆ ಮಾಡಲಾಗುತ್ತಿದ್ದು, ನಾಗವಾರದ ಎಸ್.ವಿ.ಎನ್. ಶಾಲೆಯಲ್ಲಿ ಶಾಲಾ ಮಕ್ಕಳು ವಿಶೇಷವಾಗಿ ಕ್ರಿಸ್ಮಸ್ ಹಬ್ಬದ ಆಚರಣೆ ಮಾಡಿದರು. ವಿವಿಧ ಕ್ರಿಸ್ಮಸ್ ಸ್ಥಬ್ಧ ಚಿತ್ರಗಳ ಒಳಗೊಂಡ ಕಲಾಕೃತಿಗಳು ಸೇರಿ ಸಂಗೀತ ಕಾರ್ಯಕ್ರಮದೊಂದಿಗೆ ಮಕ್ಕಳು ಅದ್ಧೂರಿ ಆಚರಣೆ ಮಾಡಿದರು.
ಪುಟಾಣಿಗಳು ಸಂತ ಕ್ಲಾಕ್, ಏಂಜಲ್ ಮಾದರಿಯ ಉಡುಪುಗಳನ್ನು ಧರಿಸಿ ಏಸುಕ್ರಿಸ್ತನ ಜೀವನ ಆಧಾರಿತವಾದ ನಾಟಕಗಳನ್ನು ಪ್ರದರ್ಶನ ನೀಡಿದರು.
ಮಾತನಾಡಿದ ಶಾಲೆಯ ಕಾರ್ಯದರ್ಶಿ ಸುಬ್ಬರಾಜು ಅವರು ಸರ್ವಧರ್ಮಗಳ ನಾಡು ನಮ್ಮದ್ದು,ಅದರಂತೆ ಶಾಲೆಯಲ್ಲಿ ಏಲ್ಲ ಧರ್ಮದ ಸಾರಾಂಶದ ಬಗ್ಗೆ ಅರಿವು ಮೂಡಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ತಿಳಿಸಿದರು.
ಮಕ್ಕಳಲ್ಲಿ ಸೌರ್ಹದ ಭಾವನೆ ಮೂಡಿಸುವುದು ನಮ್ಮ ಮೊದಲ ಗುರಿಯಾಗಿದ್ದು,ಸರ್ವಧರ್ಮದ ಸಾರವನ್ನು ಅರಿತು ಮಕ್ಕಳು ಜೀವನದಲ್ಲಿ ಪ್ರಗತಿ ಹೊಂದಲಿ ಎಂದು ಆಶಯ.

Leave a Reply

Your email address will not be published. Required fields are marked *

error: Content is protected !!