ಉದಯವಾಹಿನಿ, ಯಾದಗಿರಿ: ಬೈಕ್ ಕಳ್ಳತನ ಪ್ರಕರಣವನ್ನು ಭೇದಿಸಿರುವ ಯಾದಗಿರಿ ನಗರ ಠಾಣೆ ಪೊಲೀಸರು, ಇಬ್ಬರು ಆರೋಪಿಗಳನ್ನು ಬಂಧಿಸಿ ₹7.50 ಲಕ್ಷ ಮೌಲ್ಯದ 22 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ಮೇ ತಿಂಗಳಲ್ಲಿ ರೈಲ್ವೆ ಸ್ಟೇಷನ್ ಬಳಿ ಬೈಕ್ ಕಳವು ಪ್ರಕರಣವನ್ನು ಬೆನ್ನತ್ತಿದ ಪೊಲೀಸರು ವ್ಯಾಪಕ ಜಾಲ ಬೀಸಿ ಕಲಬುರಗಿ ತಾಲ್ಲೂಕಿನ ಆಜಾದಪುರದ ಬಾಲಾಜಿ ಆಕಡೆ ಹಾಗೂ ಆಳಂದ ತಾಲ್ಲೂಕಿನ ಯಳಸಂಗಿಯ ಗುರುಶಾಂತ ಪಾಟೀಲ ಎಂಬ ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪೃಥ್ವಿಕ್ ಶಂಕರ್ ತಿಳಿಸಿದ್ದಾರೆ. ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜೂಜಾಟ ಚಟಕ್ಕೆ ಅಂಟಿಕೊಂಡಿರುವ ಆರೋಪಿಗಳು ಅಲ್ಲಲ್ಲಿ ನಿಲ್ಲಿಸಿದ ವಾಹನಗಳನ್ನು ಕದಿಯುತ್ತಿದ್ದರು. ಕಳೆದ ಎರಡು ವರ್ಷಗಳಿಂದ ಬೈಕ್‌ಗಳನ್ನು ಕಳ್ಳತನ ಮಾಡಿ ಈಗ ಸಿಕ್ಕಿಬಿದ್ದಾರೆ.
ನಗರದ ಪೊಲೀಸ್ ಅಧಿಕಾರಿಗಳ ತಂಡ ಆರೋಪಿಗಳನ್ನು ಬಂಧಿಸಿ ಎ1 ಆರೋಪಿಯ ಅಣ್ಣನ ಹೊಲದಲ್ಲಿ 10 ಬೈಕ್, ಎ2 ಆರೋಪಿ ಹೊಲದಲ್ಲಿ 11 ಬೈಕ್ ಸೇರಿಂತೆ 22 ಬೈಕ್‌ಗಳನ್ನು ವಶಡಿಸಿಕೊಂಡಿದ್ದಾರೆ ಎಂದು ಮಾಹಿತಿ ನೀಡಿದರು. ಘಟನೆ ವಿವರ: ಕುಮಲಯ್ಯ ಕಾವಲಿ ಕುಮನೂರು ಎಂಬುವವರು ಮೇ.29ರಂದು ನಗರದ ರೈಲ್ವೆ ಸ್ಟೇಷನ್ ಮುಂದೆ ನಿಲ್ಲಿಸಿದ್ದ ಬೈಕ್ ಕಳ್ಳತನವಾದ ಬಗ್ಗೆ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
