ಉದಯವಾಹಿನಿ , ಬೆಂಗಳೂರು: ಬಿಎಂಪಿ ಬಫರ್ ಝೋನ್ ನಲ್ಲಿ ಮನೆ ಕಟ್ಟಿಕೊಂಡವರ ವಿರುದ್ಧ ಕಠಿಣ ಕ್ರಮಕ್ಕೆ ಮುಂದಾಗಿದೆ .ನಿರ್ಮಾಣ ಹಂತದಲ್ಲಿರುವ ಕಟ್ಟಡಗಳನ್ನು ಗುರಿಯಾಗಿಟ್ಟುಕೊಂಡು ಬಫರ್ ವಲಯದಲ್ಲಿ ನಿರ್ಮಿಸಿರುವ ಕಟ್ಟಡಗಳನ್ನು ಮೊದಲು ವಿದ್ಯುತ್ ಕಡಿತಗೊಳಿಸಿ ನಂತರ ತೆರವು ಮಾಡಲು ಯೋಜನೆ ರೂಪಿಸಿದೆ. ಯಲಹಂಕದ ನರಸೀಪುರ ಸೇರಿದಂತೆ ಹಲವೆಡೆ ಕೆರೆ ಜಾಗವನ್ನು ಒತ್ತುವರಿ ಮಾಡಿ ಮನೆ ನಿರ್ಮಿಸಿಕೊಳ್ಳಲಾಗುತ್ತಿದೆ. ಮುಖ್ಯ ಆಯುಕ್ತರು ಬೆಸ್ಕಾಂನಿಂದ ನೋಟಿಸ್ ಜಾರಿ ಮಾಡಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿ ನಂತರ ನಿರ್ಮಾಣ ಹಂತದಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಎಲ್ಲಾ ವಲಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ರಾಜಕಾಲುವೆ, ಸರ್ಕಾರಿ ಜಮೀನು, ಕೆರೆ ಒತ್ತುವರಿ ಮಾಡಿ ಮನೆ ಕಟ್ಟುತ್ತಿರುವ ಪ್ರಕರಣಗಳು ಹೆಚ್ಚಾಗಿವೆ. ಇವುಗಳನ್ನು ತೆರವುಗೊಳಿಸಲು ಬಿಬಿಎಂಪಿ ಹರಸಾಹಸ ಮಾಡುತ್ತಿದೆ. ಇದೀಗ ಬಫರ್ ಝೋನ್ ಕಾರ್ಯಾಚರಣೆಗೆ ಗುರಿಪಡಿಸಲಾಗಿದೆ. ಬಿಬಿಎಂಪಿ ಎಲ್ಲೆಂದರಲ್ಲಿ ಬೆಸ್ಕಾಂನಿಂದ ನೋಟಿಸ್ ನೀಡಿ ಕಟ್ಟಡ ತೆರವು ಮಾಡುತ್ತಿದೆಯೇ? ಅಥವಾ ಒತ್ತಡಕ್ಕೆ ಮಣಿದು ಸುಮ್ಮನಾಗುತ್ತಾರಾ ಎಂಬುದನ್ನು ಕಾದು ನೋಡಬೇಕಿದೆ. ಬಫರ್ ವಲಯದಲ್ಲಿ, ಮನೆಯನ್ನು ಚರಂಡಿಗಳು ಮತ್ತು ಕಾಲುವೆಗಳ ಮೇಲೆ ನಿರ್ಮಿಸಲಾಗಿದೆ. ಈ ಮೂಲಕ ಕಟ್ಟಡ ನಿರ್ಮಾಣ ಮಾಡುತ್ತಿರುವ ಸ್ಥಳವನ್ನು ಬಫರ್ ಝೋನ್ ನಲ್ಲಿ ಗುರುತಿಸಿ ಬೆಸ್ಕಾಂನಿಂದ ನೋಟಿಸ್ ನೀಡಲು ಪಾಲಿಕೆ ಚಿಂತನೆ ನಡೆಸಿದೆ. ಬಿಬಿಎಂಪಿ ಮುಖ್ಯ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನೋಟಿಸ್ ನೀಡಲು ನಿರ್ಧರಿಸಲಾಗಿದೆ.
