ಉದಯವಾಹಿನಿ , ಬೀದರ್: ತಾಲೂಕಿನ ಬಾವಗಿ ಗ್ರಾಮದ ಗ್ರಾಮ ಪಂಚಾಯಿತಿ ಸದಸ್ಯರಾದ ಸಂಗ ಮೇಶ ಹಜ್ಜರಗಿ ಜಮೀನಿನಲ್ಲಿ ಸೋಮುವಾರ ಎಳ್ಳಮಾವಾಸ್ಯೆ ಹಬ್ಬ ಆಚರಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಆಚರಿಸಲಾಗುವ ಎಳ್ಳು ಅಮಾವಾಸ್ಯೆ ಹಬ್ಬಕ್ಕೆ ವಿಶೇಷ ಮಹತ್ವವಿದ್ದು, ನೈವೇದ್ಯವನ್ನು ಬೆಳೆಯಲ್ಲಿ ಎರಚಿ ಚರಗ ಭೂಮಿ ತಾಯಿಗೆ ಉಣಬಡಿಸಿ ಸಡಗರಿಂದ
ಆಚರಿಸಲಾಯಿತು. ನಂತರ ಬಂಧು ಬಳಗ ಸ್ನೇಹಿತರು ಸೇರಿ ವಿಶೇಷವಾದ ಅಡುಗೆ ಭಜ್ಜಿ, ಜೊಳದ ರೊಟ್ಟಿ, ಕಡುಬು, ಅಂಬಲಿ, ಸವಿಯುವ ಮೂಲಕ ಸಂಭ್ರಮಿಸಿದರು.
ಗುರು ಭದ್ರೇಶ್ವರ ಸಂಸ್ಥಾನದ ಶಾಂತಕುಮಾರ ಸ್ವಾಮಿ, ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಅಧ್ಯಕ್ಷರಾದ ಲೋಕೇಶ ಕನಶೆಟ್ಟಿ, ಮಹೆಶ, ವಿಶ್ವ ಸೇರಿ ಅನೇಕರು ಉಪಸ್ಥಿತರಿದ್ದರು.
