ಉದಯವಾಹಿನಿ, ಕೆ.ಆರ್.ಪುರ: ಸಮೀಪದ ರಾಮಮೂರ್ತಿನಗರ ವಾರ್ಡಿನ ಕಲ್ಕೆರೆ ಗ್ರಾಮದ ಕಲ್ಯಾಣಿ ವೃತದಲ್ಲಿ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ಉಚಿತ ಆರೋಗ್ಯ ಶಿಬಿರದಲ್ಲಿ ರಕ್ತದಾನ ಮಾಡಿದವರಿಗೆ ಅಧ್ಯಕ್ಷೆ ಶಾಂತ ಕೃಷ್ಣಮೂರ್ತಿ ಪ್ರಮಾಣ ಪತ್ರ ವಿತರಿಸಿದರು.
ಕೆ.ಆರ್.ಪುರ,ಡಿ.೩೦- ರಾಮಮೂರ್ತಿನಗರ ವಾರ್ಡಿನ ಕಲ್ಕೆರೆ ಗ್ರಾಮದ ಕಲ್ಯಾಣಿ ವೃತ್ತದಲ್ಲಿ ಶಾಂತಕೃಷ್ಣಮೂರ್ತಿ ಫೌಂಡೇಶನ್ ವತಿಯಿಂದ ವಿವಿಧ ಆಸ್ಪತ್ರೆಗಳ ಸಹಬಾಗಿತ್ವದಲ್ಲಿ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಸಲಾಯಿತು. ಕಣ್ಣಿನ ಪರೀಕ್ಷೆ, ರಕ್ತದೊತ್ತಡ, ಸಕ್ಕರೆ ಖಾಯಿಲೆ, ಹೃದಯ ರೋಗ, ಕ್ಯಾನ್ಸರ್ ಪರೀಕ್ಷೆ, ಇಸಿಜಿ, ಪಿಜಿಯೋತೆರಪಿ, ಸ್ತ್ರೀ ರೋಗ, ಚರ್ಮರೋಗ, ಮೂಳೆ ಪರೀಕ್ಷೆ, ಇಎನ್ ಟಿ, ಮತ್ತು ಮಕ್ಕಳ ತುಟಿ ಶಸ್ತ್ರ ಚಿಕಿತ್ಸೆ ಪರೀಕ್ಷೆ ಮುಂತಾದ ತಪಾಸಣೆ ಮಾಡಲಾಯಿತು. ಎಸ್.ಕೆ.ಫೌಂಡೇಶನ್ ಅಧ್ಯಕ್ಷೆ ಶಾಂತಕೃಷ್ಣಮೂರ್ತಿ ಮಾತನಾಡಿ, ಕಳೆದ ಐದಾರು ವರ್ಷಗಳಿಂದ ರಾಮಮೂರ್ತಿನಗರ ವಾರ್ಡಿನ ಎನ್.ಆರ್.ಐ ಬಡಾವಣೆ, ಕೆ.ಚನ್ನಸಂದ್ರ, ಕಲ್ಕೆರೆ ಹಾಗೂ ವಿವಿಧ ಭಾಗಗಳಲ್ಲಿ ಬಡವರ ಅರೋಗ್ಯ ದೃಷ್ಟಿಯಿಂದ ಉಚಿತ ಅರೋಗ್ಯ ಶಿಬಿರ ಆಯೋಜನೆ ಮಾಡುತ್ತ ಬಂದಿದ್ದೇವೆ. ಸಾವಿರಾರು ಜನರು ಅರೋಗ್ಯ ಶಿಬಿರವನ್ನು ಸದುಪಯೋಗಪಡಿಸಿಕೊಂಡಿದ್ದಾರೆ.
ಇವತ್ತಿನ ಶಿಬಿರದಲ್ಲಿ ಮೂರು ಸಾವಿರಕ್ಕೂ ಅಧಿಕ ಜನರು ಅರೋಗ್ಯ ತಪಾಸಣೆ ಮಾಡಿಸಿಕೊಂಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಅರೋಗ್ಯ ಶಿಬಿರಗಳನ್ನು ಹಮ್ಮಿಕೊಂಡು ಬರುತ್ತೇವೆ ಎಂದರು. ಅರೋಗ್ಯ ಶಿಬಿರದಲ್ಲಿ ಶಾಸಕ ಬೈರತಿ ಬಸವರಾಜ, ಬಿಬಿಎಂಪಿ ಮಾಜಿ ಸದಸ್ಯ ಕಲ್ಕೆರೆ ಎಂ.ರೇವಣ್ಣ, ಫೌಂಡೇಶನ್ ಸಂಸ್ಥಾಪಕ ಕಲ್ಕೆರೆ ಕೃಷ್ಣಮೂರ್ತಿ ಮುಖಂಡರಾದ ಮಾದೇಶಣ್ಣ ಮತ್ತಿತರರು ಇದ್ದರು.
