ಉದಯವಾಹಿನಿ, ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ಕೆಆರ್ ಎಸ್ ರಸ್ತೆಗೆ ಸಿಎಂ ಸಿದ್ದರಾಮಯ್ಯ ಹೆಸರಿಡುವ ವಿಚಾರದಲ್ಲಿ ತಮ್ಮ ಹೇಳಿಕೆ ಬದಲಾಯಿಸಿದ್ದಾರೆ. ಮಹಾರಾಜರ ಕಾಲದಲ್ಲಿ ಪ್ರಿನ್ಸಸ್ ರಸ್ತೆಯ ಹೆಸರನ್ನು ದಾಖಲೆಗಳಲ್ಲಿ ನಮೂದಿಸಿದ್ದರೆ ಬದಲಾವಣೆ ಮಾಡಬಾರದು ಎಂದು ಹೇಳಿದ್ದಾರೆ.

ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಹಾರಾಜರ ಕಾಲದಲ್ಲಿ ಕೆಆರ್ ಎಸ್ ರಸ್ತೆಗೆ ರಾಜವಂಶಸ್ಥರು ಎಂಬ ಹೆಸರಿತ್ತು ಎಂಬುದನ್ನು ಬದಲಾಯಿಸುವ ಅಗತ್ಯವಿಲ್ಲ. ನನಗೆ ಇದರಿಂದ ಯಾವುದೇ ಸಮಸ್ಯೆ ಇಲ್ಲ. ಹೆಸರು ಬದಲಾಯಿಸದಂತೆ ಸ್ಥಳೀಯ ಶಾಸಕ ಹರೀಶ್ ಗೌಡ ಅವರಿಗೆ ಮನವಿ ಮಾಡುವುದಾಗಿ ಸ್ಪಷ್ಟಪಡಿಸಿದ್ದಾರೆ.
ಕೆಆರ್ ಎಸ್ ರಸ್ತೆಗೆ ಅಧಿಕೃತ ಹೆಸರಿಲ್ಲದ ಕಾರಣ ಹಾಗೂ ಖಾಲಿ ಇರುವ ಕಾರಣ ಸಿದ್ದರಾಮಯ್ಯ ಹೆಸರಿಡಬಹುದು ಎಂದು ಹೇಳಿದ್ದೆ.
ದಯವಿಟ್ಟು ಅಧಿಸೂಚನೆಯನ್ನು ಹಿಂಪಡೆಯಿರಿ. ವಿವಾದವನ್ನು ಇಲ್ಲಿಗೆ ಕೊನೆಗೊಳಿಸೋಣ. ತಕರಾರು ಸಲ್ಲಿಸುವವರು ದಾಖಲೆಯನ್ನ ಒದಗಿಸಲಿ,ಮೈಸೂರಿಗೆ ಮಹಾರಾಜರ ಕೊಡುಗೆ ಅಪಾರ. ಜನಪ್ರತಿನಿಧಿಗಳ ಕೊಡುಗೆಯೂ ಇದೆ. ಇಟ್ಟಿರುವ ಹೆಸರನ್ನು ಬದಲಾಯಿಸುವ ದುಷ್ಟತನ ನಮಗೆ ಬೇಡ ಎಂದು ಹೇಳಿದ್ದಾರೆ.

Leave a Reply

Your email address will not be published. Required fields are marked *

error: Content is protected !!