ಉದಯವಾಹಿನಿ, ಮೈಸೂರು: ಮ್ಯಾಕ್ಸ್ ಚಿತ್ರ ಯಶಸ್ವಿ ಪ್ರದರ್ಶನ ಕಾಣುತ್ತಿರುವ ಹಿನ್ನೆಲೆಯಲ್ಲಿ ನಟ ಸುದೀಪ್ ಅವರು ಭಾನುವಾರ ಮೈಸೂರಿನ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿ ಚಾಮುಂಡೇಶ್ವರಿ ದೇವಿಯ ದರ್ಶನ ಪಡೆದು, ವಿಶೇಷ ಪೂಜೆ ಸಲ್ಲಿಸಿದರು.
ಸುದೀಪ್ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ ಮ್ಯಾಕ್ಸ್ ಡಿ.25 ರಂದು ಬಿಡುಗಡೆಯಾಗಿದ್ದು, ಸಿನಿಮಾ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜತೆಗೆ ಬಾಕ್ಸ್ ಆಫೀಸ್‍ನಲ್ಲಿ ಕೂಡ ಚಿತ್ರ ಭರ್ಜರಿ ಗಳಿಕೆ ಮಾಡುತ್ತಿರುವ ಬೆಟ್ಟಕ್ಕೆ ಆಗಮಿಸಿ ಪೂಜೆ ಸಲ್ಲಿಸಿದ ಅವರೊಂದಿಗೆ ನಿರ್ಮಾಪಕ ಮತ್ತು ವಿತರಕ ಕಾರ್ತಿಕ್ ಗೌಡ ಸಾಥ್ ನೀಡಿದರು.
ನೆಚ್ಚಿನ ನಟ ಸುದೀಪ್ ಚಾಮುಂಡಿ ಬೆಟ್ಟಕ್ಕೆ ಭೇಟಿ ನೀಡಿದ ಹಿನ್ನೆಲೆ ಅಭಿಮಾನಿಗಳ ದಂಡೇ ಚಾಮುಂಡಿ ಬೆಟ್ಟಕ್ಕೆ ಹರಿದು ಬಂದಿತ್ತು. ಸುದೀಪ್ ಅವರನ್ನು ನೋಡಿ ಜೈಕಾರ, ಶಿಳ್ಳೆ ಹಾಕಿ ಖುಷಿಪಟ್ಟರು. ಅಭಿಮಾನಿಗಳನ್ನು ನಿಯಂತ್ರಿಸುವುದೇ ಪೆÇಲೀಸರಿಗೆ ಹರಸಾಹಸವಾಯಿತು. ಚಾಮುಂಡಿ ದೇವಿಗೆ ಪೂಜೆ ಮುಗಿಸಿ ದೇವಾಲಯದಿಂದ ಸುದೀಪ್ ಹೊರಬಂದೊಡನೆ ಅಭಿಮಾನಿಗಳು ಸೆಲ್ಫಿಗಾಗಿ ಮುಗಿಬಿದ್ದರು. ಕಾರಿನೊಳಕ್ಕೆ ತೆರಳಿದ ಸುದೀಪ್ ಅಭಿಮಾನಿಗಳತ್ತ ಕೈ ಬೀಸಿ ತೆರಳಿದರು.
