ಉದಯವಾಹಿನಿ, ಬೆಂಗಳೂರು: ರಾಕಿಂಗ್ ಸ್ಟಾರ್ ಯಶ್ ಜನವರಿ ೮ ರಂದು ಗೋವಾದಲ್ಲಿ ತಮ್ಮ ೩೯ ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಚಿತ್ರರಂಗದ ಅನೇಕ ನಟ-ನಟಿಯರು ಶುಭ ಹಾರೈಸಿದ್ದಾರೆ. ಇದೀಗ ಪತ್ನಿ ರಾಧಿಕಾ ಪಂಡಿತ್ ಯಶ್ ಹುಟ್ಟುಹಬ್ಬಕ್ಕೆ ಪ್ರೀತಿಯಿಂದ ವಿಶ್ ಮಾಡಿದ್ದಾರೆ. ನನ್ನ ಹೃದಯವನ್ನು ಆಳುವ ರಾಜ ನೀನು ಎಂದು ಮುದ್ದಾಗಿ ನುಡಿದಿದ್ದಾರೆ.
ರಾಧಿಕಾ ಪಂಡಿತ್ ಅವರು ಯಶ್ ಅವರೊಂದಿಗೆ ಸುಂದರವಾದ ಫೋಟೋಗಳನ್ನು ಹಂಚಿಕೊಂಡಿದ್ದಾರೆ, ಅತ್ಯುತ್ತಮ ಪತಿ ಮತ್ತು ತಂದೆ, ನೀವು ಯಾವಾಗಲೂ ನಮ್ಮ ಮಕ್ಕಳಿಗೆ ರಾಕ್, ನನ್ನ ಹೃದಯವನ್ನು ಆಳುವ ರಾಜ ಮತ್ತು ನಮ್ಮ ಜಗತ್ತನ್ನು ಯಾವಾಗಲೂ ಬೆಳಗಿಸುವ ನಕ್ಷತ್ರ. ನಾವು ಯಾವಾಗಲೂ ನಿನ್ನನ್ನು ಪ್ರೀತಿಸುತ್ತೇವೆ. ಎಂದು ಪತಿಗೆ ಜನ್ಮದಿನದ ಶುಭಾಶಯಗಳು ಎಂದು ಪ್ರೀತಿಯ ಸುರೆ ಮಳೆಗೈದಿದ್ದಾರೆ.
ಗೋವಾದಲ್ಲಿ ಮಧ್ಯರಾತ್ರಿ ಕೇಕ್ ಕತ್ತರಿಸುವ ಮೂಲಕ ಯಶ್ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಯಶ್ ಅವರು ತಮ್ಮ ಪತ್ನಿ ರಾಧಿಕಾ ಮತ್ತು ಮಕ್ಕಳೊಂದಿಗೆ ತಮ್ಮ ಹುಟ್ಟುಹಬ್ಬವನ್ನು ಆಚರಿಸಿ ಸಂಭ್ರಮಿಸಿದ್ದಾರೆ ನಟನ ಆತ್ಮೀಯ ಗೆಳೆಯ ಪಾನಿ ಪುರಿ ಕಿಟ್ಟಿ, ಕೆವಿಎನ್ ನ ರೂವಾರಿ ವೆಂಕಟ್ ಸೇರಿದಂತೆ ಹಲವರು ಹುಟ್ಟುಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡು ಶುಭ ಹಾರೈಸಿದ್ದಾರೆ.
