ಉದಯವಾಹಿನಿ, ಬೆಂಗಳೂರು: ಬಾಹ್ಯಾಕಾಶದಲ್ಲಿ ಉಪಗ್ರಹಗಳನ್ನು ಜೋಡಣೆ ಮಾಡುವ (ಡಾಕಿಂಗ್) ಸ್ಪೇಡೆಕ್ಸ್ ಯೋಜನೆಯ ಚೇಸರ್ ಹಾಗೂ ಟಾರ್ಗೆಟ್ ಯೋಜನೆ ಇಸ್ರೋ ಮತ್ತೊಮ್ಮೆ ಮುಂದೂಡಿಕೆ ಮಾಡಿದೆ.
ಜನವರಿ ೭ ರಂದು ಈ ಪ್ರಯೋಗ ನಡೆಯಲಿದೆ ಎಂದಿತ್ತು. ಅದನ್ನು ಜನವರಿ ೯ಕ್ಕೆ ಮುಂದೂಡಿಕೆ ಮಾಡಲಾಗಿತ್ತು. ಬುಧವಾರ ಮತ್ತೊಂದು ಅಪ್‌ಡೇಟ್ ನೀಡಿರುವ ಇಸ್ರೋ, ಇದನ್ನು ಮತ್ತೊಮ್ಮೆ ಮುಂದೂಡಿಕೆ ಮಾಡಲಾಗಿದೆ ಎಂದು ತಿಳಿಸಿದೆ.
ಉಪಗ್ರಹಗಳ ನಡುವಿನ ಅಂತರವನ್ನು ೨೨೫ ಮೀಟರ್‌ವರೆಗೆ ತರುವ ಕೆಲಸವನ್ನು ಮಾಡಲಾಗುತ್ತಿತ್ತು ಈ ವೇಳೆ, ಸಣ್ಣ ಪ್ರಮಾಣ ಡ್ರಿಫ್ಟ್ ಕಂಡು ಬಂದಿದೆ. ಇದು ನಮ್ಮ ನಿರೀಕ್ಷೆಗಿಂತಲೂ ಹೆಚ್ಚಾಗಿತ್ತು. ಹಾಗಾಗಿ ನಾಳೆಯ ಡಾಕಿಂಗ್ ಪ್ರಯೋಗವನ್ನು ಮುಂದೂಡಿಕೆ ಮಾಡಲಾಗಿದೆ.
ಉಪಗ್ರಹಗಳನ್ನು ಜೋಡಿಸುವ ಪ್ರಕ್ರಿಯೆಗೆ ಭೂಮಿಯ ಸಿಮ್ಯುಲೇಷನ್ ನಿಂದ ಇನ್ನಷ್ಟು ದೃಢೀಕರಣದ ಅಗತ್ಯವಿದ್ದ ಕಾರಣಕ್ಕಾಗಿ ಜನವರಿ ೭ ರಂದು ನಡೆಯಬೇಕದ್ದ ಡಾಕಿಂಗ್ ಪ್ರಯೋಗವನ್ನು ಇಸ್ರೋ ಜನವರಿ ೯ಕ್ಕೆ ಮುಂದೂಡಿಕೆ ಮಾಡಿತ್ತು. ಒಂದು ವಾರದ ಹಿಂದೆ ಈ ಎರಡೂ ಉಪಗ್ರಹಗಳನ್ನು ಪಿಎಸ್‌ಎಲ್‌ವಿ-ಸಿ೬೦ ಮೂಲಕ ಯಶಸ್ವಿಯಾಗಿ ಕಕ್ಷೆಗೆ ಸೇರಿಸಲಾಗಿತ್ತು.
