ಉದಯವಾಹಿನಿ, ಬೆಂಗಳೂರು: ಮಾಸಿಕ ೧೫,೦೦೦ ರೂ.ಗಳ ನಿಗದಿತ ಗೌರವಧನ ಮತ್ತು ಇತರ ಸೌಲಭ್ಯಗಳ ನೀಡುವಂತೆ ಒತ್ತಾಯಿಸಿ ಆಶಾ ಕಾರ್ಯಕರ್ತರು ನಡೆಸುತ್ತಿರುವ ಅನಿರ್ದಿಷ್ಟಾವಧಿ ಮುಷ್ಕರ ಶುಕ್ರವಾರ ನಾಲ್ಕನೇ ದಿನಕ್ಕೆ ಕಾಲಿಟ್ಟಿದ್ದು, ಮತ್ತಷ್ಟು ತೀವ್ರ ಹೋರಾಟ ಸಾಧ್ಯತೆ ಇದೆ.
ಕಳೆದ ಮೂರು ದಿನಗಳಿಂದ ಅಹೋರಾತ್ರಿ ಹೋರಾಟ ಹಿನ್ನೆಲೆ ಆರೋಗ್ಯ ಸೌಧದಲ್ಲಿ ನಿನ್ನೆ ಆರೋಗ್ಯ ಇಲಾಖೆ ಆಯುಕ್ತರ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಶಾ ಕಾರ್ಯಕರ್ತೆಯರ ಬೇಡಿಕೆಗಳ ಬಗ್ಗೆ ಚರ್ಚಿಸಲಾಯಿತು. ಆದರೆ, ಸರ್ಕಾರದ ಮನವಿಗೆ ಒಪ್ಪದ ಆಶಾ ಕಾರ್ಯಕರ್ತೆಯರು ಪಟ್ಟು ಬಿಡದೆ ಪ್ರತಿಭಟನೆ ಮುಂದುವರೆಸಿದ್ದಾರೆ.
ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಕರ್ನಾಟಕ ರಾಜ್ಯ ಸಂಯುಕ್ತ ಆಶಾ ಕಾರ್ಯಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಡಿ. ನಾಗಲಕ್ಷ್ಮಿ, ತಿಂಗಳಿಗೆ ೧೫ ಸಾವಿರ ರೂ. ಗೌರವಧನ ನೀಡುವುದು ಸೇರಿ ಹಲವು ಬೇಡಿಕೆ ಈಡೇರಿಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.
೧೫ ಸಾವಿರ ನೀಡಲು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರಗಳು ಸೇರಿ ವಾರ್ಷಿಕವಾಗಿ ಬೇಕಾಗುವ ಹೆಚ್ಚುವರಿ ಮೊತ್ತ ೧೭೦ ಕೋಟಿ ರೂ. ಹಾಲಿ ನೀಡುತ್ತಿರುವ ಗೌರವಧನ ಮತ್ತು ಪ್ರೋತ್ಸಾಹ ಧನ ಸೇರಿಸಿ ತಿಂಗಳಿಗೆ ೯,೫೦೦ರೂ. ಮುಂಗಡ ನೀಡಲಾಗುವುದು ಎಂಬ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರ ಪ್ರಸ್ತಾವವನ್ನು ತಿರಿಸ್ಕರಿಸಲಾಗಿದೆ ಎಂದರು..

Leave a Reply

Your email address will not be published. Required fields are marked *

error: Content is protected !!