ಉದಯವಾಹಿನಿ, ಬೆಂಗಳೂರು: ಬಹು ನಿರೀಕ್ಷಿತ 6ನೇ ಆವೃತ್ತಿಯ “ಚೈರೋಸ್ ಭೀಮಯ್ಯ ಹಾಕಿ ಕಪ್ 2025” ಇಂದಿನಿಂದ ಫೀಲ್ಡ್ ಮಾರ್ಷಲ್ ಕೆ.ಎಂ. ಕರಿಯಪ್ಪ ಹಾಕಿ ಅರೆನಾನಲ್ಲಿ ನಡೆಯಲಿದೆ. ಕರ್ನಾಟಕ ಹಾಕಿ ಅಸೋಸಿಯೇಷನ್‌ ಹಾಗೂ ಕೂರ್ಗ್ ಚಾಲೆಂಜರ್ಸ್ ಚಿಕ್‌ಪೆಟ್ ಅಸೋಸಿಯೇಷನ್ (CCCA) ಸಹಯೋಗದಲ್ಲಿ ಈ ಅಂತರ್‌-ರಾಜ್ಯ ಪಂದ್ಯಾವಳಿ 5-ಎ-ಸೈಡ್ ಮಾದರಿಯಲ್ಲಿ ಭಾರತೀಯ ಹಾಕಿ ಪ್ರದರ್ಶನ ನಡೆಯಲಿದೆ.

ಹಾಕಿ ಕಪ್‌ ಪಂದ್ಯಾವಳಿಯಲ್ಲಿ ಒಟ್ಟು 180 ಆಟಗಾರರನ್ನೊಳಗೊಂಡ ಒಟ್ಟು 20 ತಂಡಗಳು ಭಾಗವಹಿಸಲಿದ್ದಾರೆ. ಇಂದಿನಿಂದ ಜನವರಿ ೧೨ರವರೆಗೆ ಪಂದ್ಯಾವಳಿ ನಡೆಯಲಿದ್ದು, ಭಾನುವಾರ ವಿಜೇತರನ್ನು ಘೋಷಿಸಲಾಗುತ್ತದೆ. ಮಾಜಿ ಭಾರತೀಯ ಹಾಕಿ ಆಟಗಾರರಾದ ವಿ.ಆರ್. ರಘುನಾಥ್, ವಿ.ಎಸ್. ವಿನಯ, ಅಮರ್ ಐಯಮ್ಮ, ನಿತಿನ್ ತಿಮ್ಮಯ್ಯ ಮತ್ತು ನಿಕ್ಕಿನ್ ತಿಮ್ಮಯ್ಯ ಅವರು ಸಹ ಭಾಗವಹಿಸಲಿದ್ದಾರೆ. ಜನವರಿ 12 ರಂದು ನಡೆಯುವ ಅಂತಿಮ ಸುತ್ತು ನಡೆಯಲಿದ್ದು, ಬಳಿಕ ವಿಜೇತ ತಂಡ ಪದ್ಮಶ್ರೀ ಮತ್ತು ಮಾಜಿ ಭಾರತೀಯ ಹಾಕಿ ಆಟಗಾರ ಎಂ.ಪಿ. ಗಣೇಶ್ ಹಾಗೂ ಧನರಾಜ್‌ ಪಿಳ್ಳೈ ವಿತರಿಸಲಿದ್ದಾರೆ. ಸಂಘಟಕರನ್ನು ಪ್ರತಿನಿಧಿಸಿದ ಸಿಸಿಸಿಎ ಅಧ್ಯಕ್ಷ ಶ್ರೀ ಕೆ.ಡಿ. ಗಣಪತಿ ಮಾತನಾಡಿ, ಜನವರಿ 10 ರಿಂದ 12 ರವರೆಗೆ ಬೆಂಗಳೂರಿನಲ್ಲಿ 5-ಎ-ಸೈಡ್ ಚೇರೋಸ್ ಭೀಮಯ್ಯ ಹಾಕಿ ಕಪ್‌ನ 6 ನೇ ಆವೃತ್ತಿ ಘೋಷಿಸಲಾಗಿದೆ, ಇದಕ್ಕೆ ಕ್ಯೂನೆಟ್‌ ಅವರ ಪ್ರಾಯೋಜಕ್ವ ನೀಡಿದ್ದು, ಸ್ಪರ್ಧೆ ನಡೆಸಲು ಉತ್ಸಾಹ ಹೆಚ್ಚಿದೆ. ಈ ಪಂದ್ಯಾವಳಿಯು ಭಾರತದ ರಾಷ್ಟ್ರೀಯ ಕ್ರೀಡೆಯಾದ ಹಾಕಿಯನ್ನು ಬೆಂಬಲಿಸಲು ಮತ್ತು ಭಾರತದಾದ್ಯಂತದ ಆಟಗಾರರಿಗೆ ಅವರ ಪ್ರತಿಭೆಯನ್ನು ಪ್ರದರ್ಶಿಸಲು ವೇದಿಕೆಯನ್ನು ಒದಗಿಸುವ ನಮ್ಮ ಅಚಲವಾದ ಬದ್ಧತೆಯನ್ನು ಪ್ರತಿಬಿಂಬಿಸುತ್ತದೆ, ಜೊತೆಗೆ ಈ ಅದ್ಭುತ ಕ್ರೀಡೆಯ ಬೆಳವಣಿಗೆ ಮತ್ತು ಗುರುತಿಸುವಿಕೆಯನ್ನು ಉತ್ತೇಜಿಸುತ್ತದೆ.

Leave a Reply

Your email address will not be published. Required fields are marked *

error: Content is protected !!