ಉದಯವಾಹಿನಿ, ಬೆಂಗಳೂರು: ರಾಷ್ಟ್ರೀಯ ಜಲಮಾರ್ಗಗಳ ಪ್ರಮುಖ ಮೂಲಸೌಕರ್ಯ ನವೀಕರಣಕ್ಕೆ ಮುಂದಿನ ಐದು ವರ್ಷಗಳಲ್ಲಿ ೫೦ ಸಾವಿರ ಕೋಟಿ ಹೂಡಿಕೆ ಮಾಡುವುದಾಗಿ ಒಳನಾಡು ಜಲಮಾರ್ಗಗಳ ಅಭಿವೃದ್ಧಿ ಮಂಡಳಿ (ಐಡಬ್ಲ್ಯೂಡಿಸಿ) ಘೋಷಿಸಿದೆ. ಭಾರತದಲ್ಲಿ ಒಳನಾಡು ಜಲಮಾರ್ಗಗಳ ಪ್ರಚಾರ ಮತ್ತು ಪ್ರಸರಣದ ನೀತಿಯ ಚರ್ಚೆಗಾಗಿ, ಕಾಜಿರಂಗದ ಕೊಹೊರಾದಲ್ಲಿ ಆಯೋಜಿಸಿದ್ದ ಐಡಬ್ಲ್ಯೂಡಿಸಿ ಸಭೆಯ ಅಧ್ಯಕ್ಷತೆಯನ್ನು ಬಂದರು, ಹಡಗು ಮತ್ತು ಜಲಮಾರ್ಗಗಳ ಕೇಂದ್ರ ಸಚಿವ ಸರ್ಬಾನಂದ ಸೋನೋವಾಲ್ ವಹಿಸಿದ್ದರು.
ಮುಂದಿನ ಐದು ವರ್ಷಗಳಲ್ಲಿ ರೂ. ೫೦,೦೦೦ ಕೋಟಿಗಿಂತ ಹೆಚ್ಚಿನ ಬಂಡವಾಳ ಹೂಡಿಕೆಯನ್ನು ಘೋಷಿಸಿತು. ಈ ನಿಟ್ಟಿನಲ್ಲಿ, ೨೧ ಒಳನಾಡು ಜಲಮಾರ್ಗ ರಾಜ್ಯಗಳಾದ್ಯಂತ ರೂ.೧೪೦೦ ಕೋಟಿಗೂ ಹೆಚ್ಚು ಮೌಲ್ಯದ ಹೊಸ ಉಪಕ್ರಮಗಳ ಸರಣಿಯನ್ನು ಘೋಷಿಸಿ ಮಾತನಾಡಿದ ಕೇಂದ್ರ ಬಂದರು, ಶಿಪ್ಪಿಂಗ್ ಮತ್ತು ಜಲಮಾರ್ಗ ಸಚಿವ ಸರ್ಬಾನಂದ ಸೋನೊವಾಲ್, “ಕೇಂದ್ರ ಮತ್ತು ರಾಜ್ಯ ಹೀಗೆ ಎರಡೂ ಸರ್ಕಾರಗಳು ಒಳನಾಡು ಜಲಮಾರ್ಗಗಳನ್ನು ಬಲಪಡಿಸುವ ಹಲವು ಆಯಾಮಗಳ ಬಗ್ಗೆ ಚರ್ಚಿಸಿ, ಸಮಾಲೋಚಿಸಿ, ವಿಷಯ ಮಂಥನ ನಡೆಸಿ, ಅವುಗಳನ್ನು ಬಲಪಡಿಸುವ ಮೂಲಕ ಸಹಕಾರಿ ಒಕ್ಕೂಟ ವ್ಯವಸ್ಥೆಯನ್ನು ರೂಪಿಸುವ ಕುರಿತು ಐಡಬ್ಲ್ಯುಡಿಸಿ ಹೊಸ ದೃಷ್ಟಿಕೋನವನ್ನು ರೂಪಿಸಿದೆ. ಐತಿಹಾಸಿಕವಾಗಿ ನಾಗರಿಕತೆಗಳಿಗೆ ಒಳನಾಡು ಜಲಮಾರ್ಗಗಳ ಪಾತ್ರವು ಅತ್ಯುನ್ನತವಾಗಿದೆ. ಮತ್ತೊಮ್ಮೆ ನಾವು ಒಳನಾಡಿನ ಜಲಮಾರ್ಗಗಳ ಬೆಂಬಲ ವ್ಯವಸ್ಥೆಯನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿದ್ದೇವೆ.

Leave a Reply

Your email address will not be published. Required fields are marked *

error: Content is protected !!