ಉದಯವಾಹಿನಿ, ಬೆಂಗಳೂರು : ಕಾರು ಅಪಘಾತದಲ್ಲಿ ಯುವ ಪತ್ರಕರ್ತ ಭರತ್ ಮೃತಪಟ್ಟಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಗುಡಿಬಂಡೆಯಲ್ಲಿ ನಡೆದಿದೆ.
ಕೆರೆ ಕಟ್ಟೆಗೆ ಕಾರು ಡಿಕ್ಕಿ ಹೊಡೆದು ಭೀಕರ ಅಪಘಾತ . ಸಂಭವಿಸಿದ್ದು ಕಾರಿನಲ್ಲಿದ್ದ ಪತ್ರಕರ್ತ ಭರತ್ ಮೃತಪಟ್ಟಿದ್ದಾರೆ
ಗುಡಿಬಂಡೆ ತಾಲೂಕಿನ ಮಾಚಹಳ್ಳಿ ಕೆರೆ ಏರಿ ಮೇಲೆ ದುರ್ಘಟನೆ ನಡೆದಿದ್ದು.
ಹೊಸದಿಗಂತ ಪತ್ರಿಕೆಯ ವಿಶೇಷ ವರದಿಗಾರ ಜಿ ಎಸ್ ಭರತ್ ಮೃತ ದುರ್ದೈವಿ. ಬೆಂಗಳೂರಿನಲ್ಲಿ ವಾಸವಿದ್ದ ಗುಡಿಬಂಡೆ ಪಟ್ಟಣದ ಮೂಲದ ಜಿ ಎಸ್ ಭರತ್. ಗುಡಿಬಂಡೆ ಪಟ್ಟಣದಿಂದ ಬಾಗೇಪಲ್ಲಿ ಗೆ ತೆರಳುತ್ತಿದ್ದ ವೇಳೆ ಭೀಕರ ಅಪಘಾತ ಸಂಭವಿಸಿದೆ. ಕೆರೆ ಏರಿಯ ತಿರುವಿನಲ್ಲಿ ತಡೆಗೋಡೆ ಡಿಕ್ಕಿ ಹೊಡೆದು ಭೀಕರ ಅಪಘಾತ ನಡೆದಿದೆ ಗುಡಿಬಂಡೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
