ಉದಯವಾಹಿನಿ, ನವಲಗುಂದ: ಡಾ.ಬಿ.ಆರ್.ಅಂಬೇಡ್ಕರ ಅವರ ಬಗ್ಗೆ ಕೇಂದ್ರ ಸಚಿವ ಅಮಿತ್ ಶಾ ಅವಮಾನಿತ ಹೇಳಿಕೆ ಖಂಡಿಸಿ ಶುಕ್ರವಾರ ನವಲಗುಂದ ಪಟ್ಟಣ ಸಂಪೂರ್ಣ ಬಂದ್ ಮಾಡಿದರು.ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನೆ ಹಾಗೂ ವಿವಿಧ ಸಂಘಟನೆ ಪದಾಧಿಕಾರಿಗಳು ಕಾರ್ಯಕರ್ತರು ನಗರದಲ್ಲಿ ಅಮಿತ್ ಶಾ ಹಿಡಿದು ದಿಕ್ಕಾರ ಕೂಗಿ ಟೈರ್ ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದರು.
ಜಿಲ್ಲಾಧ್ಯಕ್ಷ ಪುಂಡಲೀಕ ಚಲವಾದಿ, ಮಾಲತೇಶ ಚಲವಾದಿ, ನಾಗರಾಜ ಕಾಳೆ, ಈರಣ್ಣ ಶಿಡಗಂಟಿ, ಬಸವರಾಜ ಮುಧೋಳ, ರಾಜು ನಡುವಿನಮನಿ, ಮಹಾಂತೇಶ ಚಲವಾದಿ, ರವಿ ಬೆಂಡಿಗೇರಿ, ಕಾಶೀನಾಥ ಕಾಳೆ ನಂದಿನಿ ಹಾದಿಮನಿ, ನಿಂಗವ್ವ ಶಿವಣ್ಣಣ್ಣವರ, ರಾಜು ದೊಡಮನಿ, ಮಹಾಂತೇಶ ಭೋವಿ, ರವಿ ಬೆಂಡಿಗೇರಿ, ಶಿವಾನಂದ ಚಲವಾದಿ, ಮಂಜುನಾಥ ಗಿರಿಯನ್ನವ್ವರ, ಸತೀಶ ಪೂಜಾರ, ದಲಿತ ಸಂಘರ್ಷ ಸಮಿತಿ ಪದಾಧಿಕಾರಿಗಳು ಕಾರ್ಯಕರ್ತರು ಇದ್ದರು.
