
ಉದಯವಾಹಿನಿ, ಕಲಬುರಗಿ : ಟಿಪ್ಪರ್ ಮತ್ತು ಬೈಕ್ ಡಿಕ್ಕಿಯಾಗಿ ಯುವತಿ ಸ್ಥಳದಲ್ಲಿಯೇ ಮೃತಪಟ್ಟ ಘಟನೆ
ಇಎಸ್ ಐ ಆಸ್ಪತ್ರೆ ಹತ್ತಿರ ಸಂಭವಿಸಿದೆ.
ಅಶ್ವಿನಿ ಸಾಗರ ( 21) ಸಾವಿಗೀಡಾದ ಯುವತಿ.ಎನ್‍ಜಿಒ ಕಾಲೋನಿಯಿಂದ ಸಿದ್ದೇಶ್ವರ ಕಾಲೋನಿಗೆ ಬೈಕ್ ಮೇಲೆ ಹೊರಟಾಗ ದುರ್ಘಟನೆ ಸಂಭವಿಸಿದ್ದು, ಯುವತಿ ತಲೆ ಮೇಲೆ ಟಿಪ್ಪರ್ ಗಾಲಿ ಹಾಯ್ದುಹೋಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.ಸಂಚಾರಿ 2 ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
