ಉದಯವಾಹಿನಿ,ಬೆಂಗಳೂರು: ನವದೆಹಲಿಯಲ್ಲಿ ಗವರೇನ್ಸ್ ನೌ ರವರು ಆಯೋಜಿಸಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮಕ್ಕೆ ಅತ್ಯುತ್ತಮ ಸೇವೆ ಸಲ್ಲಿಸಿರುವ ವ್ಯವಸ್ಥಾಪಕ ನಿರ್ದೇಶಕರು ಅನ್ಬುಕುಮಾರ್ ಭಾಆಸೇ, ಅವರಿಗೆ PSU ಆತ್ಮನಿರ್ಭರ್ ನಾಯಕತ್ವ ಪ್ರಶಸ್ತಿ ಯನ್ನು ಸತೀಶ್ ಚಂದ್ರ ದುಬೆ, ಕಲ್ಲಿದ್ದಲು ಮತ್ತು ಗಣಿ ರಾಜ್ಯ ಸಚಿವರು, ಭಾರತ ಸರ್ಕಾರರವರು ಮತ್ತು .ಸತ್ಯಪಾಲ್ ಸಿಂಗ್, ಮಾಜಿ ಕೇಂದ್ರ ಸರ್ಕಾರದ ರಾಜ್ಯ ಸಚಿವರು ಮಾನವ ಸಂಪನ್ಮೂಲ, ಗ್ರಾಮೀಣಾಭಿವೃದ್ಧಿ, ಜಲಸಂಪನ್ಮೂಲ ಮತ್ತು ಗಂಗಾ ನದಿ ಕಾಯಕಲ್ಪ ಇಲಾಖೆ ರವರುಗಳು ಪ್ರಶಸ್ತಿ ಪ್ರದಾನ ಮಾಡಿದರು.
ನಿಗಮದಲ್ಲಿ ಒಟ್ಟು ೧೩೧೪ ಬಸ್ಸುಗಳು ಪುನಶ್ಚೇತನಗೊಂಡಿದ್ದು, ಕರ್ನಾಟಕ ಸಾರಿಗೆ ೧೧೮೪, ನಗರ ಸಾರಿಗೆ ೧೧೫, ಐರಾವತ ಕ್ಲಬ್ ಕ್ಲಾಸ್ ೧೫ ಬಸ್ಸುಗಳನ್ನು ಸಹ ಪುನಶ್ಚೇತನಗೊಳಿಸಲಾಗಿದೆ. ರೂ.೨೫೦ ಕೋಟಿಗೂ ಹೆಚ್ಚು ಹಣ ನಿಗಮಕ್ಕೆ ಉಳಿತಾಯವಾಗಿದ್ದು, ಸದರಿ ಉಪಕ್ರಮವು ಆತ್ಮನಿರ್ಭರ್ ಭಾರತ್ ಪರಿಕಲ್ಪನೆಯಡಿ ಸ್ವಾವಲಂಬನೆಯನ್ನು ಉತ್ತೇಜಿಸುವ ಯೋಜನೆಯು ಅತ್ಯುತ್ತಮವಾಗಿದೆ.ಬಿ.ಎಸ್ ನಾಗರಾಜ ಮೂರ್ತಿ, ಉಪಮುಖ್ಯ ಯಾಂತ್ರಿಕ ಅಭಿಯಂತರರು, ಕರಾರಸಾ ನಿಗಮ ರವರು ಸಹ ಉಪಸ್ಥಿತರಿದ್ದರು.
