ಉದಯವಾಹಿನಿ, ವಾಷಿಂಗ್ಟನ್ : ಟೆಕ್ ಉದ್ಯಮದ ದಿಗ್ಗಜ ಎಲಾನ್ ಮಸ್ಕ್ ಮತ್ತೆ ತಂದೆಯಾಗಿದ್ದಾರೆ. ಈ ಬಾರಿ ಮಸ್ಟ್ ಮತ್ತು ಅವರ ಪಾರ್ಟನರ್ ಶಿವೋನ್ ಜಿಲಿಸ್‌ಗೆ ಗಂಡು ಮಗು ಜನಿಸಿದ್ದು, ಮಗುವಿಗೆ ಸೆಲ್ಟನ್ ಲೈಕರ್ಗಸ್ ಎಂದು ನಾಮಕರಣ ಮಾಡಲಾಗಿದೆ.
ಅವರ ಹಿಂದಿನ ಮಗುವಿನ (ವರದಿಗಳು ನಿಜವಾಗಿದ್ದರೆ ಇದು ಅವರ 14ನೇ ಮಗುವಾಗುವಾಗಲಿದೆ, ನ್ಯೂರಾಲಿಂಕ್ ಕಂಪನಿಯಲ್ಲಿ ಕಾರ್ಯನಿರ್ವಾಹಕಿಯಾಗಿರುವ ಜಿಲಿಸ್, ಈ ಸಂತಸದ ಸುದ್ದಿಯನ್ನು ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. ಮಸ್ಟ್ ಸಹ ಈ ವಿಷಯವನ್ನು ದೃಢಪಡಿಸಿದ್ದಾರೆ.
ಎಲಾನ್ ಅವರೊಂದಿಗೆ ಚರ್ಚಿಸಿದ ನಂತರ, ನಮ್ಮ ಮಗುವಿನ ಬಗ್ಗೆ ನೇರವಾಗಿ ಹೇಳುವುದೇ ಸೂಕ್ತ ಎಂದು ನಾವು ಭಾವಿಸಿದೆವು. ನಮ್ಮ ಮಗ ಸೆಲ್ಡನ್ ಲೈಕರ್ಗಸ್, ಅರ್ಕಾಡಿಯಾ ಹುಟ್ಟುಹಬ್ಬದಂದು ಜನಿಸಿದ್ದಾನೆ ಎಂದು ಜಿಲಿಸ್ ಬರೆದುಕೊಂಡಿದ್ದಾರೆ.
2021ರಲ್ಲಿ ಮಸ್ಕ್ ಮತ್ತು ಜಿಲಿಸ್ ದಂಪತಿಗೆ ಅವಳಿ ಮಕ್ಕಳಾಗಿದ್ದವು. 2024ರಲ್ಲಿ ಅವರಿಗೆ ಮತ್ತೊಂದು ಮಗು ಜನಿಸಿತ್ತು. ಆದರೆ ಈ ಮಗುವಿನ ಹೆಸರು ಮತ್ತು ಲಿಂಗವನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಈಗ ಜನಿಸಿದ ಸೆಲ್ಸನ್ ಲೈಕರ್ಗಸ್ ಮಸ್ಕ್ ಮತ್ತು ಜಿಲಿಸ್ ದಂಪತಿಗಳ ನಾಲ್ಕನೇ ಮಗುವಾಗಿದೆ. ಇದರ ಜೊತೆಗೆ, ಸಂಗೀತಗಾರ್ತಿ ಗೈಮ್ಸ್ ಜೊತೆಗೂ ಮಸ್‌ಗೆ ಇಬ್ಬರು ಮಕ್ಕಳಿದ್ದಾರೆ. ಮಾಜಿ ಪತ್ನಿ ಜಸ್ಟಿನ್ ವಿಲ್ಸನ್ ಅವರೊಂದಿಗೆ ಐದು ಮಕ್ಕಳಿದ್ದಾರೆ.ಇತ್ತೀಚೆಗೆ ವಿವಾದಾತ್ಮಕ ಸುದ್ದಿ ಹೊರಬಿದ್ದಿತ್ತು. ಸಾಮಾಜಿಕ ಮಾಧ್ಯಮ ತಾರೆ ಆಗ್ಲೆ ಸೇಂಟ್ ಕ್ಲರ್ ಅವರು ಮಸ್ಕ್ ಅವರ 13ನೇ ಮಗುವಿಗೆ ಜನ್ಮ ನೀಡಿದ್ದಾಗಿ ಹೇಳಿಕೊಂಡಿದ್ದರು. ಆದರೆ ಮಸ್ಟ್ ಈ ಬಗ್ಗೆ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.
2024 ರ ಜನವರಿಯಲ್ಲಿ ಸೇಂಟ್ ಬಾತ್‌ಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಸ್ಟ್ ಜೊತೆಗೆ ತನಗೆ ಮಗುವಾಗಿದೆ ಎಂದು ಸೇಂಟ್ ಕ್ಲೀರ್ ಹೇಳಿಕೊಂಡಿದ್ದಾರೆ. ಆದರೆ ಈ ಬಗ್ಗೆ ಮಸ್ಟ್ ಇನ್ನೂ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಒಟ್ಟಾರೆಯಾಗಿ, ಮಸ್ಟ್ ಅವರ ವೈಯಕ್ತಿಕ ಜೀವನ ಮತ್ತೊಮ್ಮೆ ಸದ್ದು ಮಾಡುತ್ತಿದೆ. ಎಲಾನ್ ಮಸ್ಕ್, ಬಹುತೇಕರಿಗೆ ಪರಿಚಿತ ಹೆಸರು. ಆದರೆ, ಅವರ ವೈಯಕ್ತಿಕ ಜೀವನ ಕೂಡ ಸಾಕಷ್ಟು ಕುತೂಹಲ ಮೂಡಿಸುತ್ತದೆ. ಹಲವು ಸಂಬಂಧಗಳ ಮೂಲಕ ಮಸ್ತ್ 12 ಮಕ್ಕಳ ತಂದೆಯಾಗಿದ್ದಾರೆ. 13ನೇ ಮಗುವಿನ ಬಗ್ಗೆ ಮಹಿಳೆ ಹೇಳಿಕೊಂಡಿದ್ದಾರೆ ಆದರೆ ಮಸ್ಟ್ ದನ್ನು ದೃಢಪಡಿಸಿಲ್ಲ. ಇದು ದೃಢವಾದರೆ ಈಗ ಜನಿಸಿರುವ ಮಗು ಮಸ್ತ್ ಅವರ 14ನೇ ಮಗುವಾಗಲಿದೆ.

Leave a Reply

Your email address will not be published. Required fields are marked *

error: Content is protected !!