ಉದಯವಾಹಿನಿ, ಹನುಮಸಾಗರ: ಸಮೀಪದ ಜಹಗೀರ ಗುಡದೂರ ಗ್ರಾಮದಲ್ಲಿ ಶರಣಬಸವೇಶ್ವರ ಜಾತ್ರಾ ಮಹೋತ್ಸವ ನಡೆಯಿತು.
ಒಂದು ವಾರದಿಂದ ದೇವಸ್ಥಾನದಲ್ಲಿ ಪೂಜೆ, ಹವನ, ಪಲ್ಲಕ್ಕಿ ಉತ್ಸವ, ಕಳಸದ ಮೆರವಣಿಗೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.
ಉಚ್ಚಾಯ ಮೆರವಣಿಗೆ ನಡೆಯಿತು.ರಥಾಂಗ ಮತ್ತು ಗಾಯತ್ರಿ ಹೋಮಗಳು ನಡೆದವು ದೇವರಿಗೆ ಅಭಿಷೇಕ ಮಾಡಲಾಯಿತು. ಪಟ್ಟಲಚಿಂತಿ ಗ್ರಾಮದಿಂದ ಹಗ್ಗವನ್ನು ಮೆರವಣಿಗೆ ಮೂಲಕ ತರಲಾಯಿತು. ವೆಂಕಟಾಪುರದಿಂದ ಕಳಸ ತರಲಾಯಿತು.
ಸಾವಿರಾರು ಭಕ್ತರ ಸಮ್ಮುಖದಲ್ಲಿ ರಥ ಎಳೆಯಲಾಯಿತು. ಭಕ್ತರು ಉತ್ತತ್ತಿ ಸಮರ್ಪಿಸಿದರು.
ಜಾತ್ರೆ ಪ್ರಯುಕ್ತ ನಡೆದ ಸಾಮೂಹಿಕ ವಿವಾಹ ಸಮಾರಂಭದಲ್ಲಿ 15 ಜೋಡಿಗಳ ದಾಂಪತ್ಯಕ್ಕೆ ಕಾಲಿಟ್ಟವು. ಸರ್ವಧರ್ಮ ಸ್ವಾಮೀಜಿಗಳು ಸಾನ್ನಿಧ್ಯ ವಹಿಸಿದ್ದರು.ಕಲಾವಿದರು ಹಾಸ್ಯ ಕಾರ್ಯಕ್ರಮ ನೀಡಿದರು. ಗಾಯನ ಕಾರ್ಯಕ್ರಮ ನಡೆಯಿತು.
