ಉದಯವಾಹಿನಿ, ಮುನವಳ್ಳಿ: ಕಲ್ಲೊಳ್ಳಿ ಗ್ರಾಮದ ಸಮಿಪ ಮಲಪ್ರಭಾ ಎಡದಂಡೆ ಕಾಲುವೆಯಲ್ಲಿ ಶುಕ್ರವಾರ ಬೃಹತ್ ಗಾತ್ರದ ಮೊಸಳೆ ಕಂಡುಬಂದಿದ್ದು ರೈತರು ಅರಣ್ಯ ಇಲಾಖೆಯವರಿಗೆ ತಿಳಿಸಿ ನಂತರ ಅರಣ್ಯ ಇಲಾಖೆಯವರು ಸ್ಪಂದಿಸಿ ಸಿಬ್ಬಂದಿಗಳು ಹಾಗೂ ಅಗ್ನಿಶಾಮಕ ಸಿಬ್ಬಂದಿ ಸಹಾಯದಿಂದ ಮೊಸಳೆ ರಕ್ಷಿಸಿ ಮರಳಿ ಮಲಪ್ರಭಾ ಜಲಾಶಯಕ್ಕೆ ಬಿಟ್ಟಿದ್ದಾರೆ.
ಉಪವಲಯ ಅರಣ್ಯಾಧಿಕಾರಿ ಪರವಿಣಅಕ್ತರ ಸರಸರಿ, ಪಾಂಡುರಂಗ ರಜಪೂತ, ರಮೇಶ ಪಾಟೋಳಿ, ಸಿದ್ದಪ್ಪ ಬಾರಕಿ, ಅಗ್ನಿಶಾಮಕದ ಸಿಬ್ಬಂದಿಗಳು, ಗ್ರಾ.ಪಂ ಸಿಬ್ಬಂದಿಗಳು ಇತರರು ಉಪಸ್ಥಿತರಿದ್ದರು.
