ಉದಯವಾಹಿನಿ, ಬೆಂಗಳೂರು : ಕೇರಳ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಅಧಿಕಾರಿಗಳ ತಂಡವು ಕೆ ಎಸ್ ಆರ್ ಟಿಸಿಗೆ ಭೇಟಿ ನೀಡಿತು. ಈ ಸಂದರ್ಭದಲ್ಲಿ ನಿಗಮದಲ್ಲಿನ ಕಾರ್ಮಿಕ ಸ್ನೇಹಿ ಹಾಗೂ ಪ್ರಯಾಣಿಕ ಸ್ನೇಹಿ ಉಪಕ್ರಮಗಳು ಹಾಗೂ ಸಾರಿಗೆಯೇತರ ಆದಾಯದ ವಿಷಯಗಳ ಬಗ್ಗೆ ವಿ.ಅನ್ಬುಕುಮಾರ್, ಭಾಆಸೇ., ವ್ಯವಸ್ಥಾಪಕ ನಿರ್ದೇಶಕರು, ಕ.ರಾ.ರ.ಸಾ. ನಿಗಮ ರವರಿಂದ .ಎಸ್.ಪ್ರಮೋಜ್ ಸಂಕರ್, ಐ.ಒ.ಎಫ್.ಎಸ್. ಅಧ್ಯಕ್ಷರು ಹಾಗೂ ವ್ಯವಸ್ಥಾಪಕ ನಿರ್ದೇಶಕರು ವಿವರವಾಗಿ ಮಾಹಿತಿ ಪಡೆದುಕೊಂಡರು.
ನಿಗಮದ, ಘಟಕ, ಕಾರ್ಯಾಗಾರ ಹಾಗೂ ಕೇಂದ್ರ ಕಚೇರಿಗೆ ಭೇಟಿ ನೀಡಿದರು. ಬೆಂಗಳೂರು ಕೇಂದ್ರೀಯ ವಿಭಾಗದ ಘಟಕ-೨ಕ್ಕೆ ಭೇಟಿ ನೀಡಿದ ತಂಡವು ವಿವಿಧ ಮಾದರಿಯ ಬಸ್ ಬ್ರಾಂಡಿಂಗ್ ಮತ್ತು ನಿರ್ವಹಣೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಬಸ್ಸುಗಳ ಕಾರ್ಯ ನಿರ್ವಹಣೆ, ಪುನಶ್ಚೇತನ ಕಾರ್ಯ, ಆರೋಗ್ಯ ಯೋಜನೆ, ವಿದ್ಯಾ ಚೇತನ ಯೋಜನೆ, ಮಾಹಿತಿ ತಂತ್ರಜ್ಞಾನಗಳಉಪಕ್ರಮಗಳಾದ ಎಚ್ ಆರ್ ಎಂಎಸ್, ಆನ್ ಲೈನೆ ಜಿಯೋ ಟ್ಯಾಗ್ ಹಾಜರಾತಿ, ಹಾಗೂ ಯುಪಿಐ ಉಪಕ್ರಮಗಳ ಕುರಿತು ಬಹಳ ಸಂತೋಷ ವ್ಯಕ್ತಪಡಿಸಿದರು. ಡಾ.ನಂದಿನಿದೇವಿ ಕೆ. ಭಾಆಸೇ., ನಿರ್ದೇಶಕರು (ಸಿ ಮತ್ತು ಜಾ),ಇತರೆ ಹಿರಿಯ ಅಧಿಕಾರಿಗಳು, ಕ.ರಾ.ರ.ಸಾ. ನಿಗಮ, ಹಾಗೂ ಕೇರಳ ರಸ್ತೆ ಸಾರಿಗೆ ಸಂಸ್ಥೆಯಿಂದ ಎ.ಶಾಜಿ, ಆರ್ಥಿಕ ಸಲಹೆಗಾರರು ಮತ್ತು ಮುಖ್ಯ ಲೆಕ್ಕಾಧಿಕಾರಿ, ಉಲ್ಲಾಸ್‌ಬಾಬು, ಪ್ರಧಾನ ವ್ಯವಸ್ಥಾಪಕರು (ಎಸ್ಟೇಟ್), ಶ್ರೀ ನಿಶಾಂತ್ ಎಸ್., ಉಪ ಪ್ರಧಾನ ವ್ಯವಸ್ಥಾಪಕರು, (ಐ.ಟಿ), ಶ್ರೀ ನವೀನ್ ಎನ್.ಐ, ಸಮನ್ವಯ ಅಧಿಕಾರಿ (ಇಂಧನ ವಿಭಾಗ) ಹಾಗೂ ಜರ್ಮನಿ ಸರ್ಕಾರದ ಪ್ರತಿನಿಧಿ ಶಿರೀಸ್ ಮಹೇಂದ್ರು ರವರು ಉಪಸ್ಥಿತರಿದ್ದರು.
