ಉದಯವಾಹಿನಿ, ನವದೆಹಲಿ: ಲಾಹೋರಿನ ಗಡಾಫಿ ಕ್ರೀಡಾಂಗಣದಲ್ಲಿ ನಡೆದ ನ್ಯೂಜಿಲೆಂಡ್ ಹಾಗೂ ದಕ್ಷಿಣ ಆಫ್ರಿಕಾ ನಡುವಿನ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಪಂದ್ಯದಲ್ಲಿ ಕಿವೀಸ್ ಬಳಗ 50 ರನ್ ಗಳ ಭರ್ಜರಿ ಜಯವನ್ನು ಸಾಧಿಸಿದ್ದು ಚೋಕರ್ಸ್ ಎಂಬ ಹಣೆಪಟ್ಟಿಯೊಂದಿಗೆ ದಕ್ಷಿಣ ಆಫ್ರಿಕಾ ತಂಡ ನಿರ್ಗಮಿಸಿದೆ. ಇನ್ನೂ ದಕ್ಷಿಣ ಆಫ್ರಿಕಾ ಪರ ಡೇವಿಡ್ ಮಿಲ್ಲರ್ (100 ರನ್, 67 ಎಸೆತ, 10 ಬೌಂಡರಿ, 4 ಸಿಕ್ಸರ್) ಅಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ನ್ಯೂಜಿಲೆಂಡ್ ಬೌಲರ್‌ಗಳ ಬೆಂಡೆತ್ತಿದ ಮಿಲ್ಲರ್ ತಂಡವನ್ನು ಗೆಲುವಿನತ್ತ ಕೊಂಡೊಯ್ಯುವ ಮುನ್ಸೂಚನೆಯನ್ನು ನೀಡಿದರು. ಆದರೆ, ಅಂತಿಮವಾಗಿ ಸೋಲಿನ ಅಂತರವನ್ನು ತಗ್ಗಿಸುವಲ್ಲಿ ಯಶಸ್ವಿಯಾದರು. ಇದೀಗ ಟೂರ್ನಿಯಿಂದ ಹೊರಬಿದ್ದ ಬೆನ್ನಲ್ಲೇ ಡೇವಿಡ್ ಮಿಲ್ಲರ್ ಆರೋಪ ಮಾಡಿದ್ದು, ಕ್ರೀಡಾ ವಲಯದಲ್ಲಿ ಹೊಸದೊಂದು ಚರ್ಚೆಗೆ ನಾಂದಿ ಹಾಡಿದೆ.
బెంద్యదే బళ్ళి మాతెనాడదే డేవిడ్ మిల్లరా, 1 గంటి 40 ನಿಮಿಷಗಳ ಪ್ರಯಾಣವಷ್ಟೇ ಆದರೆ ಅದನ್ನು ನಿರ್ವಹಿಸಬೇಕಲ್ಲವೇ. ಪಂದ್ಯ ಮುಗಿದ ಮರುದಿನ ಬೆಳಗಿನ ಜಾವ ಪ್ರಯಾಣಿಸಬೇಕು. ಪಂದ್ಯ ಮುಗಿದ ನಂತರ ಮರಳಿ ಪ್ರಯಾಣಿಸಿದ್ದೇವೆ. ಒಟ್ಟಾರೆ ಐದು ಗಂಟೆಗಳ ಪ್ರಯಾಣದ ನಂತರ ಸುಧಾರಿಸಿಕೊಳ್ಳಲು ಸಾಕಷ್ಟು ಸಮಯ ಇರಬೇಕಿತ್ತು. ಆದರೆ ಪರಿಸ್ಥಿತಿ ನಾವು ಅಂದುಕೊಂಡಂತೆ ಇರಲಿಲ್ಲ.
